ಗುಡಿಸಲು ಸಹಿತ ವೃದ್ಧ ಭಸ್ಮ
ಉಪ್ಪಿನಂಗಡಿ: ಬೀಡಿ ಬ್ರಾಂಚ್ ಆಗಿ ಬಳಕೆಯಾಗುತ್ತಿದ್ದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಸಾವೀಗೀಡಾದವರನ್ನು ಕರಾಯ ಗ್ರಾಮ ನಿವಾಸಿ ಅಬ್ಬೋನು ಅಲಿಯಾಸ್ ಅಬ್ದುಲ್ ರಹಿಮಾನ್ (65) ಎಂದು ಗುರುತಿಸಲಾಗಿದೆ.
ಇವರು ತನ್ನ ಮನೆ ಸಮೀಪ ಗುಡಿಸಲು ನಿರ್ಮಿಸಿ ಅದರಲ್ಲಿ ಬೀಡಿ ಬ್ರಾಂಚ್ ವ್ಯವಹಾರ ನಡೆಸುತ್ತಿದ್ದರು. ಆಕಸ್ಮಿಕವಾಗಿ ಬೆಂಕಿ ತಗುಲಿ ಇಡೀ ಗುಡಿಸಲು ಅಗ್ನಿಗಾಹುತಿಯಾಗಿದ್ದು, ಅದರೊಳಗೆ ಸಿಲುಕಿ ಅಬ್ಬೋನು ಸುಟ್ಟು ಕರಕಲಾಗಿದ್ದಾರೆ.
ಸಂಭ್ರಮಕ್ಕೆ ಸೂತಕ: ಕೆಲ ದಿನಗಳ ಹಿಂದೆಯಷ್ಟೇ ಅಬ್ಬೋನು ಮೊಮ್ಮಗಳ ಮದುವೆ ನಡೆದಿದ್ದು, ಗುರುವಾರ ಮದುಮಗಳನ್ನು ಮದುಮಗನ ಮನೆಗೆ ಕಳುಹಿಕೊಡುವ ಔತಣಕೂಟವನ್ನು ಸಮೀಪದ ದೇಂತಾರು ಎಂಬಲ್ಲಿನ ಬಂಧುಗಳ ಮನೆಯಲ್ಲಿ ಆಯೋಜಿಸಲಾಗಿತ್ತು. ಈ ಔತಣಕೂಟಕ್ಕೆ ಅಬ್ಬೋನು ಅವರ ಎಲ್ಲಾ ಬಂಧುಗಳು ಹೋಗಿದ್ದು, ಅನಾರೋಗ್ಯದ ಕಾರಣಕ್ಕೆ ಇವರು ಹೋಗಿರಲಿಲ್ಲ ಎನ್ನಲಾಗಿದೆ.
ಈ ಹಿಂದೆ ಒಂದು ಬಾರಿ ಹೃದಯಾಘಾತಕ್ಕೆ ತುತ್ತಾಗಿದ್ದ ಇವರು, ಗುರುವಾರವೂ ಹೃದಯಾಘಾತಕ್ಕೆ ತುತ್ತಾಗಿದ್ದ ವೇಳೆ ಸೇದುತ್ತಿದ್ದ ಬೀಡಿಯ ಬೆಂಕಿ ಇವರ ಬಟ್ಟೆಗೆ ಸ್ಪರ್ಶಿಸಿ ಗುಡಿಸಲನ್ನು ವ್ಯಾಪಿಸಿರುವ ಸಾಧ್ಯತೆ ಅಂದಾಜಿಸಲಾಗಿದೆ.
ಮೃತರು ಓರ್ವ ಹೆಣ್ಣು, ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

