ದೇಶದ ಸುಭದ್ರತೆಗೆ ಮೋದಿ ನೇತೃತ್ವ ಅಗತ್ಯ: ಸುನಿಲ್ ಕುಮಾರ್
ಕಾರ್ಕಳ: ದೇಶದ ಸುಭದ್ರತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಅಗತ್ಯ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಸಾಣೂರು ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ಸಾಣೂರಿನ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆಗೆ ಆರು ತಿಂಗಳ ಮೊದಲೇ ದೇಶಾದ್ಯಂತ ಮೋದಿ ಅಲೆ ಎದ್ದಿದ್ದು, ದೇಶಕ್ಕೊಬ್ಬ ಸಮರ್ಥ ನಾಯಕನ ಅನಿವಾರ್ಯತೆಯಿಂದಾಗಿ ಅದು ಸಹಜವೂ ಆಗಿತ್ತು ಎಂದರು. ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಪರಿಷತ್ ಸದಸ್ಯ ಎಂ.ಕೆ. ವಿಜಯ ಕುಮಾ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಮಿಯ್ಯಾರು ಶಕ್ತಿಕೇಂದ್ರ ಅಧ್ಯಕ್ಷ ಉದಯ ಕೋಟ್ಯಾನ್, ತಾ.ಪಂ ಸದಸ್ಯೆ ಸುನಿತ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ನವೀನ್ ನಾಯಕ್, ಸಾಣೂರು ಬಿಜೆಪಿ ಅಧ್ಯಕ್ಷ ಏರ್ನಡ್ಕ ವಿಶ್ವನಾಥ ಶೆಟ್ಟಿ ಇದ್ದರು. ಸಾಣೂರಿನ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭ ಬಿಜೆಪಿ ಸೇರ್ಪಡೆಗೊಂಡರು. ಸಾಣೂರಿನ ಬಿಜೆಪಿ ಕಾರ್ಯಕರ್ತರಾದ ಮಿತ್ತಲ್ಲ ಸುಂದರ ಶೆಟ್ಟಿ, ನಾಗೇಶ್ ಕಾಮತ್, ಪಮ್ಮಾನಾಡಿ ಕೃಷ್ಣ ಶೆಟ್ಟಿ, ಧರ್ಮಡ್ಕ ಸುಂದರ ಶೆಟ್ಟಿ, ಕೊಲ್ದರ್ಮೊಟ್ಟು ಶಂಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

