ಮೈಸೂರಿನಲ್ಲಿ ಎಸ್ಡಿಪಿಐ- ಜೆಡಿಎಸ್ ಬೃಹತ್ ರ್ಯಾಲಿ
ಮೈಸೂರು: ಮೈಸೂರು- ಕೊಡಗು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಪರ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಗುರುವಾರ ನಗರದಲ್ಲಿ ರ್ಯಾಲಿ ನಡೆಸಲಾಯಿತು.
ಶಾಂತಿನಗರದ ಮೈದಾನದಿಂದ ಆರಂಭವಾದ ರ್ಯಾಲಿ ಶಾಂತಿನಗರ, ಉದಯಗಿರಿ, ಎನ್.ಆರ್. ಮೊಹಲ್ಲಾ, ಟಿಪ್ಪು ವೃತ್ತ, ಫೌಂಟನ್ ವೃತ್ತ, ಪುಲಿಕೇಶಿ ರಸ್ತೆ, ತಿಲಕ್ನಗರ, ಮಿಷನ್ ಆಸ್ಪತ್ರೆ ಸೇರಿದಂತೆ ಇನ್ನಿತರೆಡೆಗಳಲ್ಲಿ ಸಂಚರಿಸಿ ಚಂದ್ರಶೇಖರಯ್ಯ ಅವರಿಗೆ ಮತ ನೀಡುವಂತೆ ಮತದಾರಲ್ಲಿ ಕೋರಲಾಯಿತು.
ಶಾಸಕ ಜಿ.ಟಿ. ದೇವೇಗೌಡ, ಎಸ್ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಸದಸ್ಯರಾದ ಎಂ.ಜೆ. ರವಿಕುಮಾರ್, ಬಿ.ಎಂ. ನಟರಾಜು, ರಾಮು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಇನ್ನೊಂದೆಡೆ ನಗರ ಪಾಲಿಕೆಯ 17ನೇ ವಾರ್ಡಿಗೆ ಒಳಪಡುವ ಕುವೆಂಪುನಗರ, ಶಾಂತಿಸಾಗರ ಕಾಂಪ್ಲೆಕ್ಸ್, ನವಿಲು ರಸ್ತೆ ಸೇರಿದಂತೆ ವಿವಿಧೆಡೆ ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಅಭ್ಯರ್ಥಿ ಚಂದ್ರಶೇಖರಯ್ಯ ಅವರ ಪುತ್ರ ಡಾ. ಸುಭಾಷ್, ಪಾಲಿಕೆ ಸದಸ್ಯ ಕೆಂಪಣ್ಣ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಶಾಸಕ ಸಾ.ರಾ. ಮಹೇಶ್ ಅವರು ಕೆ.ಟಿ. ಸ್ಟ್ರೀಟ್ನಲ್ಲಿರುವ ಶ್ರೀರಾಮಮಂದಿರಕ್ಕೆ ಪೂಜೆ ಸಲ್ಲಿಸಿ, ಕೆ.ಟಿ. ಸ್ಟ್ರೀಟ್, ಶ್ರೀ ಟಾಕೀಸ್, ಚಿಕ್ಕ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

