ದಕ್ಷಿಣ ಕನ್ನಡ

ಭಜನೆ ನಿಲ್ಲಿಸಿಲ್ಲ: ಶಾಸಕ ಬಾವ

Published On :

ಮಂಗಳೂರು: ಕೃಷ್ಣಾಪುರದಲ್ಲಿ ನಡೆಯುತ್ತಿದ್ದ ಭಜನೆಯನ್ನು ನಿಲ್ಲಿಸಲಾಗಿಲ್ಲ, ಬಿಜೆಪಿಗರು ನನ್ನ ವಿರುದ್ಧ ಷಡ್ಯಂತ್ರ ಭಾಗವಾಗಿ ಈ ಆರೋಪ ಮಾಡುತ್ತಿದ್ದಾರೆ ಎಂದು ಸುರತ್ಕಲ್ ಶಾಸಕ ಮೊಯ್ದಿನ್ ಬಾವ ಹೇಳಿದರು. ಭಜನೆ ನಡೆಯುವ ದಿನ ನಾನು ಬೆಂಗಳೂರಲ್ಲಿದ್ದೆ. ಆರೋಪ ಬಂದಾಗ ನಾನು ಸುರತ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಬಳಿ ವಿಚಾರಿಸಿದೆ. ಇನ್‌ಸ್ಪೆಕ್ಟರ್ ಭಜನೆ ನಡೆಯುವಲ್ಲಿಗೆ ಹೋಗಿ ಧ್ವನಿವರ್ಧಕ ಶಬ್ದ ಕಡಿಮೆ ಮಾಡುವಂತೆ ಸೂಚಿಸಿದ್ದಾರೆ ಎನ್ನುವುದು ನನಗೆ ವಿಚಾರಣೆ ವೇಳೆ ತಿಳಿದು ಬಂತು. ಈ ಬಗ್ಗೆ ನಾನು ಇನ್‌ಸ್ಪೆಕ್ಟರ್‌ನನ್ನು ತರಾಟೆಗೆ ತೆಗೆದುಕೊಂಡೆ. ಯಾವುದೇ ಧರ್ಮ ವಿರೋಧಿಯಾಗಿ ನಾನು ನಡೆಯುವುದಿಲ್ಲ. ಎಲ್ಲ ಧರ್ಮದ ಮೇಲೆ ನನಗೆ ಗೌರವ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

--
ಏಕಕಾಲದಲ್ಲಿ ಕಾಂಗ್ರೆಸ್, ಬಿಜೆಪಿ ಪಾದಯಾತ್ರೆ

ಬಂಟ್ವಾಳ:  ಮೆಲ್ಕಾರಿನಿಂದ ಕಾಂಗ್ರೆಸ್ ಹಾಗೂ ಬಿ.ಸಿ.ರೋಡು ಕೈಕಂಬದಿಂದ ಬಿಜೆಪಿಯ ಪಾದಯಾತ್ರೆ ಆರಂಭಗೊಂಡಿದ್ದು ಇನ್ನೇನು ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಪರಸ್ಪರ ಮುಖಾಮುಖಿಯಾಗುತ್ತದೆ ಎನ್ನುವಷ್ಟರಲ್ಲೇ ಎಚ್ಚೆತ್ತುಕೊಂಡ ಚುನಾವಣೆ ಅಧಿಕಾರಿಗಳು ಮುಂದಾಗಬಹುದಾದ ಅಪಾಯವನ್ನು ತಪ್ಪಿಸಿರುವ ಘಟನೆ ಸೋಮವಾರ ನಡದಿದೆ.
ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರತ್ಯೇಕ ರೋಡ್ ಶೋ ಏಕಕಾಲದಲ್ಲಿ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡ ಚುನಾವಣೆ ಅಧಿಕಾರಿಗಳು ಕಾಂಗ್ರೆಸ್ ಪಾದಯಾತ್ರೆಯನ್ನು ಗೂಡಿನ ಬಳಿ ಬಳಿ ತಡೆದರೆ ಬಿಜೆಪಿಯ ಪಾದಯಾತ್ರೆ ಬಂಟ್ವಾಳ ಪೇಟೆಯತ್ತ ಸಾಗಿದ ಬಳಿಕ ಬಿ.ಸಿ. ರೋಡಿನತ್ತ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಬಿಜೆಪಿಯ ಮೆರವಣಿಗೆ ಮುಖ್ಯವೃತ್ತ ದಾಟಿ ಬಂಟ್ವಾಳ ಪ್ರವೇಶಿಸಿದ ಕೆಲ ಹೊತ್ತಿನಲ್ಲಿಯೇ ಕಾಂಗ್ರೆಸ್ ಮೆರವಣಿಗೆಗೆ ಪಾಣೆಮಂಗಳೂರು ಪೇಟೆ ರಸ್ತೆಯ ಮೂಲಕ ಬಿ.ಸಿ. ರೋಡಿಗೆ ಪ್ರವೇಶಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.