ದಕ್ಷಿಣ ಕನ್ನಡ

ಪೈಪ್ಲೈನ್ ಯೋಜನೆಗೆ ಮರುಜೀವ

Published On :

ಮೂಲ್ಕಿ: ಉಡುಪಿ ಜಿಲ್ಲೆಯ ಪಾದೂರಿನಲ್ಲಿನ ಕಚ್ಚಾತೈಲ ಸಂಗ್ರಹಣಾಗಾರಕ್ಕೆ ಮಂಗಳೂರಿನ ತೋಕೂರಿನಿಂದ ಪೈಪ್ಲೈನ್ ಮೂಲಕ ತರಲು ಉದ್ದೇಶಿಸಿರುವ ಕಚ್ಚಾ ತೈಲ ಸಾಗಣೆಯ ಯೋಜನೆಗೆ ಮತ್ತೆ ಜೀವ ಬಂದಿದೆ.
ಯೋಜನೆಯ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ಗೈಲ್ ಸಂಸ್ಥೆಯು ಎರಡು ದಿನಗಳಿಂದ ಕಿನ್ನಿಗೋಳಿ ಸಮೀಪದ ಭಟ್ಟಕೋಡಿ, ಗೋಳಿಜೋರ, ಶಿಬರೂರು, ನಡುಗೋಡು, ಗುತ್ತಕಾಡು, ಶಾಂತಿಪಲ್ಕೆ, ಬಳ್ಕುಂಜೆಯ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು, ಕುಕ್ಕಿಕಟ್ಟೆ ಮತ್ತಿತರ ಪ್ರದೇಶಗಳಲ್ಲಿ ಪೈಪ್ಲೈನ್ ಹಾದು ಹೋಗುವ ದಾರಿಯಲ್ಲಿ ಗುರುತು ಕಂಬಗಳನ್ನು ಹಾಕಿದ್ದು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ.
ಯೋಜನೆಗೆ ಅವಕಾಶ ನೀಡುವುದಿಲ್ಲವೆಂದು ಜನಪ್ರತಿನಿಧಿಗಳು ಹೇಳುತ್ತಿದ್ದು ಇದೀಗ ತೋಕೂರಿನಿಂದ ಬಾಳ, ಕಾಟಿಪಳ್ಳ, ಸೂರಿಂಜೆ, ಕಿನ್ನಿಗೋಳಿ, ಫಲಿಮಾರ್, ಇನ್ನಾ, ಮುದರಂಗಡಿ, ಎಲ್ಲೂರು, ಬೆಳಪು ಮೂಲಕ ಪಾದೂರಿಗೆ ಪೈಪ್ಲೈನ್ ಮೂಲಕ ಕಚ್ಚಾತೈಲ ಸಾಗಾಣೆಯಾಗಲಿದ್ದು ಈ ಬಗ್ಗೆ ಈ ಹಿಂದೆ ಸರ್ವೆ ಕಾರ್ಯ ನಡೆದಿದ್ದು ಯೋಜನೆಯಲ್ಲಿ ಭೂ ಮಾಲೀಕರಿಗೆ ಶೇ.10ರಷ್ಟು ಪರಿಹಾರ ನೀಡುವುದಾಗಿ ಹೇಳಲಾಗಿತ್ತು. ಅಲ್ಲದೆ ವಶ ಪಡಿಸಿಕೊಂಡ ಭೂಮಿಯಲ್ಲಿ ಮನೆ ನಿರ್ಮಾಣ, ಬಾವಿ ನಿರ್ಮಾಣ, ಆಳವಾಗಿ ಬೇರು ಹೋಗುವ ಮರಗಳಿಗೆ ನಿಷೇಧ ಮುಂತಾದ ನಿರ್ಬಂಧಗಳನ್ನು ಹಾಕಿದ್ದು ಇದರಿಂದ ಕೃಷಿಕರಿಗೆ ಸಮಸ್ಯೆಯಾಗಲಿದೆ ಎಂದು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು.
ಆದರೆ ಸ್ಥಳೀಯ ಪಂಚಾಯಿತಿಯ ಗಮನಕ್ಕೂ ತಾರದೆ ದಿನಗಳಿಂದ ರಾತ್ರಿ ವೇಳೆಯಲ್ಲಿ ಗುರುತು ಕಂಬಗಳನ್ನು ಅಳವಡಿಸಿದ್ದು ಜನರನ್ನು ರೊಚ್ಚಿಗೆಬ್ಬಿಸಿದೆ. ಜನರಿಗೆ ಯೋಜನೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲದಿದ್ದು ಇದು ಪಾದೂರು-ತೋಕೂರು ಯೋಜನೆಯೋ ಅಥವಾ ಹರಿಹರ- ಮಂಗಳೂರು ಗ್ಯಾಸ್ ಪೈಪ್ಲೈನ್ ಯೋಜನೆಯೋ ಎಂಬುದು ತಿಳಿದುಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.