ದಕ್ಷಿಣ ಕನ್ನಡ

26 ರಂದು 'ಥೈ ಚೈ ಮತ್ತು ಕ್ವಾಂಗ್ ದಿನಾಚರಣೆ'

Published On :

ಮಂಗಳೂರು: ಕದ್ರಿ ಹರುಕಾ ವೈಶು ಸಾಂಸ್ಕೃತಿಕ ವಿದ್ಯಾಲಯ ವತಿಯಿಂದ ಏ. 26 ರಂದು ಬೆಳಗ್ಗೆ 10 ಗಂಟೆಗೆ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ 'ರಾಷ್ಟ್ರೀಯ ಥೈ ಚೈ ಮತ್ತು ಕ್ವಾಂಗ್ ದಿನಾಚರಣೆ' ನಡೆಯಲಿದೆ. ಕಾರ್ಯಕ್ರಮದಲ್ಲಿ ನಿಧಾನ, ಧ್ಯಾನಸ್ಥ ಚಲನೆ, ವಿಶ್ರಾಂತಿ, ಒತ್ತಡ ಕಡಿಮೆ, ಸ್ವರಕ್ಷಣೆಯ ಧ್ಯಾನ ಮುಂತಾದ ಕುರಿತು ತಿಳಿಸಲಾಗುತ್ತದೆ. ಇದು ಮೂಲತಃ ಚೀನಾದ ಪದ್ಧತಿಯಾಗಿದ್ದು, ಅಮೇರಿಕಾ, ಜಪಾನ್. ಹಾಂಕಾಂಗ್, ಮಲೇಶಿಯಾದಲ್ಲಿ ಜನಪ್ರಿಯಗೊಂಡಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾಲಯದ ನಿರ್ದೇಶಕ 7760643305 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ನಾಳೆ ಕ್ಯಾಂಪ್ಕೋ ಶಾಖೆ ಉದ್ಘಾಟನೆ
ಮಂಗಳೂರು: ಸಹಕಾರಿ ಕ್ಷೇತ್ರದ ಬೃಹತ್ ಸಂಸ್ಥೆ ಕ್ಯಾಂಪ್ಕೋ ಏ. 18 ರಂದು ಕುಂದಾಪುರದ ಸಿದ್ಧಾಪುರದಲ್ಲಿ ಶಾಖೆ ಪ್ರಾರಂಭಗೊಳ್ಳಲಿದೆ.
ಸಿದ್ಧಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಉದ್ಘಾಟನೆಗೊಳ್ಳಲಿದ್ದು, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಉದ್ಘಾಟಿಸುವರು. ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಂ. ಸುರೇಶ್ ಭಂಡಾರಿ, ಸಿದ್ಧಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಗೋಪಾಲಕೃಷ್ಣ ಕಾಮತ್ ಪಾಲ್ಗೊಳ್ಳುವರು. ಕೃಷಿಕರು ತಮ್ಮ ಅಡಕೆ ಮತ್ತು ಕೊಕ್ಕೋ ಉತ್ಪನ್ನಗಳನ್ನು ಈ ಶಾಖೆಯ ಮೂಲಕ ಮಾರಾಟ ಮಾಡಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.