ಮತದೇವರ ಬಹುರೂಪ
ಮಂಗಳೂರು: ಕೈ ಇಲ್ಲದವಳ ಕಾಲು ಬೆರಳಿಗೆ ಶಾಯಿ, ಹೆಗಲೇರಿಕೊಂಡೇ ವಯೋ ವೃದ್ಧರು, ರೋಗಿಗಳಿಂದ ಮತ ಚಲಾವಣೆ, ಅಭ್ಯರ್ಥಿಗಳು ಬಗ್ಗೆ ಅರಿವೇ ಇರದಿದ್ದರೂ ವಿಶಿಷ್ಟ ಚೇತನರಿಂದ ಮತ ಚಲಾವಣೆ!
ಎಡಗೈ ಬದಲು ಬಲಗೈ ಶಾಯಿ. ಉಸ್ತುವಾರಿ ಸಚಿವರು ಮತ ಚಲಾಯಿಸಲು ಬಂದಾಗ ಎದ್ದು ನಿಂತು ಕೈಗೆ ಶಾಯಿ ಹಾಕಿದ ಸಿಬ್ಬಂದಿ. ಪ್ರತಿ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡುತ್ತಿದ್ದ 68 ವರ್ಷದ ವೃದ್ಧೆ ಮತದಾನ ಮಾಡಿದ ತಕ್ಷಣ ಸಾವು. ಮತಯಂತ್ರಗಳ ತೊಂದರೆಯಿಂದ ಮತದಾನ ವಿಳಂಬ. ಮದುವೆ ಮನೆಯಂತಿರುವ ಮತಗಟ್ಟೆಗಳು...
ಇದು ಈ ಬಾರಿಯ ಮತದಾನದ ವಿಶೇಷ. ಎಲ್ಲ ವಿಶೇಷಗಳ ನಡುವೆಯೇ, ಪರ ವಿರೋಧಿ ಅಲೆಗಳ ಅಬ್ಬರಗಳ ನಡುವೆ ಈ ಬಾರಿ ಅತಿ ಹೆಚ್ಚು ಮತದಾನ ನಡೆದು ಜನರಲ್ಲಿ ಮತ ಚಲಾಯಿಸುವ ಹೊಸ ಅಲೆ ಸೃಷ್ಟಿಯಾಗಿದ್ದು ಸುಳ್ಳಲ್ಲ.
ಬೆಳ್ತಂಗಡಿಯಲ್ಲಿ ಕೈ ಇಲ್ಲದ ಸಬಿತಾ ಮೋನಿಸ್ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಆದರೆ ಅವರಿಗೆ ಕೈ ಇಲ್ಲದ ಹಿನ್ನೆಲೆಯಲ್ಲಿ ಕಾಲು ಬೆರಳಿಗೆ ಶಾಯಿ ಹಾಕಿದರು. ಸೋಮಾರಿಗಳಾಗಿ ಮತದಾನಕ್ಕೆ ಬಾರದೆ ಮನೆಯಲ್ಲಿ ಕುಳಿತು ನೆವ ಹೇಳುವರು ಇವರನ್ನು ನೋಡಿ ಕಲಿಯಬೇಕು. ವಯೋ ವೃದ್ಧ ಮಾಜಿ ಯೋಧ ಭೋಜರಾಜ ಹೆಗ್ಡೆ ಕೂಡಾ ಮತಚಲಾಯಿಸಿ ಎಲ್ಲರಿಗೂ ಮಾದರಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

