ದಕ್ಷಿಣ ಕನ್ನಡ

'ಪರಂಪರೆ ಉಳಿಸಲು ವೇದ ಕಲಿಯಿರಿ'

Published On :

ಸುಳ್ಯ: ನಮ್ಮ ಸಂಸ್ಕೃತಿಯ ಆಧಾರ ಸ್ತಂಭಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದದ ಅದೆಷ್ಟೋ ಸಂಪುಟಗಳು ಕಳೆದು ಹೋಗಿದ್ದು, ಬೆರಳೆಣಿಕೆಯ ಕೆಲವಷ್ಟೇ ಉಳಿದಿವೆ. ಅವುಗಳನ್ನಾದರೂ ಉಳಿಸಿಕೊಳ್ಳುವ ದೃಷ್ಟಿಯಿಂದ ಮತ್ತು ವೈದಿಕ ಪರಂಪರೆಯ ಅಗಾಧತೆ ಮತ್ತು ಉದಾತ್ತತೆಯನ್ನು ಪರಿಚಯಿಸಿ ಮುಂದುವರೆಸಿಕೊಂಡು ಹೋಗುವುದಕ್ಕೆ ವಿದ್ಯಾಥರ್‌ಗಳು ಶಾಲೆಗಳಲ್ಲಿ ಸಂಸ್ಕೃತವನ್ನು ಪಠ್ಯ ವಿಷಯವನ್ನಾಗಿ ಅಧ್ಯಯನ ಮಾಡಬೇಕು ಎಂದು ಸಂಸ್ಕೃತ ವಿದ್ವಾಂಸ, ಉಪನ್ಯಾಸಕ ಡಾ. ಶ್ರೀಶ ಕುಮಾರ್ ಹೇಳಿದರು.
ಅವರು ಸುಳ್ಯ ಹಳೆ ಗೇಟಿನ ದೇವಪ್ರಸಾದದಲ್ಲಿ ಶ್ರೀ ಕೇಶವ ಕೃಪಾ ಕಲಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಆರಂಭವಾದ 35 ದಿನಗಳ ವೇದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಪಾಕಿಸ್ತಾನ, ಬಾಂಗ್ಲಾಗಳಿಂದ ನಮ್ಮ ದೇಶಕ್ಕೆ ಇರುವ ಅಪಾಯಗಳಿಂದ ಹೆಚ್ಚಿನ ಅಪಾಯ ನಮ್ಮವರಿಂದಲೇ ಇದೆ. ಕೇವಲ ಹಿಂದುತ್ವ ಎಂದು ಹೇಳಿಕೊಂಡರೆ ಸಾಲದು. ವೇದಗಳ ತಿರುಳನ್ನು ಅರ್ಥಮಾಡಿಕೊಂಡು ಅನುಸರಿಸಿದರೆ ಮಾತ್ರ ಹಿಂದುತ್ವ ಉಳಿಯುತ್ತದೆ. ಅದಕ್ಕೆ ಪೂರಕ ಶಿಕ್ಷಣ ಈ ಶಿಬಿರದಲ್ಲಿ ದೊರೆಯಬೇಕಾಗಿದೆ ಎಂದರು.
ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ ಮುಖ್ಯ ಅತಿಥಿಗಳಾಗಿದ್ದರು. ಶ್ರೀವರ ಜ್ಯುವೆಲ್ಲರ್ಸ್ ಮಾಲಕ ಎನ್. ಬಾಲಕೃಷ್ಣ ಭಟ್ ಶಿಬಿರ ಉದ್ಘಾಟಿಸಿದರು.
ಶ್ರೀಕೃಷ್ಣ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಚಂದ್ರ ಭಟ್ ಕುಂಬ್ರ ನಿರೂಪಿಸಿದರು. ನಟರಾಜ ಶರ್ಮ ಮತ್ತು ಹಿರಿಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಲರಾಮ ಭಟ್, ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಶ್ರೀದೇವಿ ನಾಗರಾಜ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.