ದಕ್ಷಿಣ ಕನ್ನಡ

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟರಿಗೆ ಮೀಸಲು ಬೇಡ: ಸಿದ್ದಿಖಿ

Published On :

ಮಂಗಳೂರು: ಅನುದಾನ ರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ವರ್ಗಗಳಿಗೆ ಮೀಸಲು ನೀಡುವಂತೆ ಸರ್ಕಾರ ಹೇಳಬಾರದು ಎಂದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಎಂ.ಎಸ್.ಎ. ಸಿದ್ದಿಖಿ ಹೇಳಿದರು.
 ಯೇನೆಪೋಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿಪ್ರದಾನ ಮಾಡಿ ಮಾತನಾಡಿದರು. ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಸೀಟು ನೀಡಿದರೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು. ಸರ್ಕಾರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ರಕ್ಷಕರಂತೆ ಕೆಲಸ ಮಾಡಬೇಕು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಪರಿಶಿಷ್ಟರಿಗೆ ಮೀಸಲು ವಿಧಿಸಿದರೆ ಸಂವಿಧಾನದ 30 (1) ವಿಧಿ ಉಲ್ಲಂಘಿಸಿದಂತಾಗುತ್ತದೆ. ಅಲ್ಪಸಂಖ್ಯಾತರಿಗೆ ಅವರ ಇಷ್ಟದಂತೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಅವಕಾಶ ಸಂವಿಧಾನದಲ್ಲಿದೆ ಎಂದರು.
 ಸಂವಿಧಾನ ನಿರ್ದೇಶನದಂತೆ ಈ ಆಯೋಗ ಸ್ಥಾಪನೆಯಾಗಿದೆ. ಈಗ ಜೈನರೂ ಅಲ್ಪಸಂಖ್ಯಾತರ ವ್ಯಾಪ್ತಿಯೊಳಗೆ ಸೇರಿದ್ದಾರೆ ಆದ್ದರಿಂದ ಅವರು ಸೌಲಭ್ಯದಲ್ಲಿ ಪಾಲು ಪಡೆಯುತ್ತಾರೆ ಎಂದರು.
 247 ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ಪದವಿಪ್ರದಾನ ಮಾಡಲಾಯಿತು.
 ದಂತ ವೈದ್ಯ ಪದವೀಧರ ಅಂಬಿಲಿ ನಾನ್‌ಕುಟ್ಟನ್ ಸಿರಿಯನ್ ಸ್ಯಾಮ್, ಎಂಬಿಬಿಎಸ್‌ನ ಆಯಿಶಾತ್ ಮಹಶೂದ್, ಪಿಬಿಬಿಎಸ್ಸಿ ಅಲ್ಪೋನ್ಸಾ ಜಾನ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಯೇನೆಪೋಯ ವಿವಿಯ ಕುಲಪತಿ ಯೇನೆಪೋಯ ಅಬ್ದುಲ್ಲ ಕುಂಞ ಅಧ್ಯಕ್ಷತೆ ವಹಿಸಿದ್ದರು. ಅಲ್ಪಸಂಖ್ಯಾತ ಶಿಕ್ಷ ಸಂಸ್ಥೆಗಳ ಮಹಿಳಾ ವಿಭಾಗ ಅಧ್ಯಕ್ಷೆ ಶಬಿಸ್ತಾನ್ ಗಫ್ಪಾರ್, ವಿವಿ ನಿರ್ದೇಶಕ ಪ್ರೊ.ಪಿ.ಸಿ.ಎಂ.ಕುಂಞ, ರಿಜಿಸ್ಟ್ರಾರ್ ಸಿ.ವಿ.ರಘುವೀರ್, ಮಂಗಳೂರು ವಿವಿ ನಿವೃತ್ತ ಕುಲಪತಿ ಎಂ.ಐ. ಸವದತ್ತಿ ಇದ್ದರು.
ಮೊಯ್ಲಿ, ಪೂಜಾರಿ ಡೊಂಬರಾಟ
ಮಂಗಳೂರು: ಎತ್ತಿನ ಹೊಳೆ, ನೇತ್ರಾವತಿ ನದಿ ತಿರುವು ವಿಚಾರವನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಮಾಜಿ ಸಚಿವ ಜನಾರ್ದನ ಪೂಜಾರಿ ಸ್ವಾರ್ಥಕ್ಕೆ ಬಳಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶ್ರೀಕರ ಪ್ರಭು ಆರೋಪಿಸಿದ್ದಾರೆ. ಇಬ್ಬರು ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಟೆಂಡರ್ ತೆರೆಯದೆ ಶಂಕುಸ್ಥಾಪನೆ ಮಾಡುವ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಮೊಯ್ಲಿ ಹಿಡನ್ ಅಜೆಂಡಾ ಅಡಗಿದೆ. ಇದು 'ಕನ್ನಡಪ್ರಭ' ಬಹಿರಂಗ ಪಡಿಸಿದೆ. ಎಲೆಮಲ್ಲಪ್ಪ ಕೆರೆಯಿಂದ ಕೋಲಾರಕ್ಕೆ ನೀರು ನೀಡಬಹುದು ಎಂದು ಈಗ ಜನಾರ್ದನ ಪೂಜಾರಿ ಹೇಳುತ್ತಾರೆ. ಇದು ಕೇವಲ ಸೀಟಿಗಾಗಿ ಮಾಡುವ ಡೊಂಬರಾಟ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.