ದಕ್ಷಿಣ ಕನ್ನಡ

'ವೈಯಕ್ತಿಕ ಗಲಾಟೆಗೆ ಕೋಮು ಬಣ್ಣ'

Published On :

ಮಂಗಳೂರು: ಉಳ್ಳಾಲದಲ್ಲಿ ಇತ್ತೀಚೆಗೆ ವೈಯಕ್ತಿಕ ದ್ವೇಷದ ಗಲಾಟೆಗೆ ಸ್ಥಾಪಿತ ಹಿತಾಸಕ್ತಿಗಳು ಕೋಮು ಗಲಭೆಯ ಬಣ್ಣ ನೀಡಿದವು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದರು.   ಸರ್ಕ್ಯೂಟ್ ಹೌಸ್ ಮತ್ತು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ದಕ್ಷಿಣ ಕನ್ನಡ ಜನರು ಶಾಂತಿ ಬಯಸುವವರು. ರಾಜಕೀಯ ಕಾರಣಕ್ಕೆ ಗಲಾಟೆಗಳಿಗೆ ಕೋಮು ಗಲಭೆ ಬಣ್ಣ ನೀಡಲಾಯಿತು. ಪೊಲೀಸರಿಗೆ ಗಲಭೆ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೆವು. ಪೊಲೀಸರು ಉಳ್ಳಾಲ ಗಲಭೆಯಲ್ಲಿ ಸಮರ್ಥವಾಗಿ ಕರ್ತವ್ಯ ನಿಭಾಯಿಸಿದ್ದಾರೆ ಎಂದರು.   ರಾಜ್ಯದಲ್ಲಿ ನಾಗರಿಕರಿಗೆ ಅದರಲ್ಲಿಯು ಮಹಿಳೆಯರಿಗೆ ರಕ್ಷಣೆ ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಜತೆಗೂಡಿ ಕೆಲಸ ಮಾಡಬೇಕಿದೆ. ನಿಷೇಧಾಜ್ಞೆ ವಿಧಿಸಿದ ವೇಳೆ ಯಾರೇ ಆಗಲಿ ಅಲ್ಲಿ ಪ್ರವೇಶಿಸುವುದು ಸರಿ ಅಲ್ಲ. ಚುನಾವಣೆ ಬರುತ್ತಿರುವುದರಿಂದ ಸಮಾಜ ವಿದ್ರೋಹಿಗಳು ಶಾಂತಿ ಕದಡುವ ಕೆಲಸಕ್ಕೆ ಪ್ರಯತ್ನಿಸುತ್ತಿದೆ ಎಂದರು. ಈ ಸಂದರ್ಭ ಮಾಧ್ಯಮ ಮತ್ತು ಪೊಲೀಸರು ಜಾಗೃತವಾಗಿದ್ದು ಅಪರಾಧ ತಡೆಗಟ್ಟಲು ಪ್ರಯತ್ನಿಸಬೇಕು ಎಂದರು.   ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿದ ವೇಳೆ ಶಾಸಕ ಜೆ.ಆರ್.ಲೋಬೊ, ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಬಿ.ಇಬ್ರಾಹಿಂ, ಜಿ.ಎ. ಬಾವ, ಶಶಿಧರ ಹೆಗ್ಡೆ, ಪಿ.ವಿ. ಮೋಹನ್, ಮಮತಾ ಗಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.