ಡೊಂಕು ಬಾಲದ ನಾಯಕರ ಡಾಗ್ವಾಕ್!
ಮಂಗಳೂರು: ಫ್ಯಾಶನ್ಶೋಗೆ ಏನೂ ಕಮ್ಮಿ ಇಲ್ಲ ಇವುಗಳ ಪ್ರದರ್ಶನ. ಒಡೆಯನ ಅಣತಿ ಪಾಲಿಸುತ್ತಿದ್ದರೆ, ಇನ್ನು ಕೆಲವು ತಾವೇ ಠಾಕುಠೀಕಾಗಿ ಹೆಜ್ಜೆ ಹಾಕುತ್ತಿದ್ದವು. ಒಂದಷ್ಟು ಅಳುಕು, ನಿರ್ಭೀತ ನಡೆ, ಕಳ್ಳಹೆಜ್ಜೆಯನ್ನೂ ಬಿಡದ ಸ್ವಭಾವ, ಎಲ್ಲಕ್ಕೂ ಮಿಗಿಲಾಗಿ ಯಜಮಾನನ ನಿಯತ್ತಿಗೆ ತಲೆಬಾಗಿ ನಡೆಯುತ್ತಿದ್ದ ಡಾಗ್ವಾಕ್...
ಇದು ಮಂಗಳೂರು ನೆಹರೂ ಮೈದಾನದಲ್ಲಿ ಭಾನುವಾರ ರಜಾಮಜಾ ಅನುಭವಿಸಲು ಬಂದವರಿಗೆ ಕಂಡ ಶ್ವಾನ ಪ್ರದರ್ಶನ. ಕರಾವಳಿ ಕೆನೆಲ್ ಕ್ಲಬ್ ದಕ್ಷಿಣ ಭಾರತ ಮಟ್ಟದ ಈ ಪ್ರದರ್ಶನ ಏರ್ಪಡಿಸಿತ್ತು.
ಆಕರ್ಷಕ ಶ್ವಾನ ಮುಖದ ಪ್ರವೇಶ ದ್ವಾರದ ಮೂಲಕ ಒಳಹೋದರೆ ಎಲ್ಲೆಲ್ಲೂ ಶ್ವಾನಗಳದ್ದೇ ಕಾರುಭಾರು. ಅತೀ ಸಣ್ಣ ಆಮದು ತಳಿ ಮಿನೇಚರ್ ಪಿಂಚರ್ನಿಂದ ತೊಡಗಿ ಅತೀ ಎತ್ತರದ ಗ್ರೇಟ್ ಡೇನ್ ವರೆಗಿನ ಶ್ವಾನಗಳಿದ್ದವು.
ಸುಮಾರು 25ಕ್ಕೂ ಹೆಚ್ಚು ಪ್ರಬೇಧಗಳ 250ಕ್ಕೂ ಅಧಿಕ ಶ್ವಾನಗಳು ಪಾಲ್ಗೊಂಡಿದ್ದವು.
ಅಪರೂಪದ ತಳಿಗಳಾದ ಅಕಿತ, ಬೆಲ್ಜಿಯನ್ ಶೆಪರ್ಡ್, ಸೈಬೀರಿಯನ್ ಹಸ್ಕಿಯಂತಹ ಶ್ವಾನಗಳೂ ಇದ್ದವು. ಭಾರತ ತಳಿ ಮುಧೋಳ ಬಿಟ್ಟರೆ ಬೇರೆಲ್ಲ ವಿದೇಶಿ ಆಮದು ತಳಿಗಳು ಕಂಡುಬಂದವು. ತೀರ್ಪುಗಾರರಾಗಿ ಕೆನ್ತ್ ಚುವ ಮತ್ತು ಸುದರ್ಶನ್ ಆಗಮಿಸಿದ್ದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ಪ್ರಭು ಪ್ರದರ್ಶನ ಉದ್ಘಾಟಿಸಿ, ಶ್ವಾನದ ಜತೆ ಪ್ರದರ್ಶನಾಂಗಣಕ್ಕೆ ಒಂದು ಸುತ್ತು ಬಂದರು.
ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಶ್ವಾನ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಆಯ್ಕೆ ವೇಳೆ ಭಾರತದಲ್ಲೇ ತಯಾರಾದ ತಳಿಯನ್ನು ಪರಿಗಣಿಸುವ ಪರಿಪಾಠವಿದೆ. ಭಾರತದ್ದೇ ಇರುವುದು ಮುಧೋಳ ಬಿಟ್ಟರೆ ಬೇರೆ ತಳಿ ಇಲ್ಲ. ಶ್ವಾನ ಪ್ರದರ್ಶನ ಮೂಲಕ ಮಂಗಳೂರಿನ ಪ್ರಚಾರ ದೇಶಕ್ಕೆ ಆಗುತ್ತಿದೆ ಎಂದರು. ಬೆಳಗ್ಗಿನಿಂದ ಸಂಜೆ ವರೆಗೆ ನಡೆದ ಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ವಾನಕ್ಕೆ ಬೆಸ್ಟ್ ಜೂನಿಯರ್ ಹ್ಯಾಂಡ್ಲರ್ ಪ್ರಶಸ್ತಿ ನೀಡಲಾಯಿತು. ಅಪರೂಪದ ಭಾರತದ ತಳಿಗೆ ಬ್ರೆಡ್ ಇನ್ ಇಂಡಿಯಾ ಪ್ರಶಸ್ತಿ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

