ದಕ್ಷಿಣ ಕನ್ನಡ

ಶಿಶ್ನ, ಮೂತ್ರನಾಳ ಇಲ್ಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Published On :

ಮಣಿಪಾಲ: ಹುಟ್ಟಿನಿಂದಲೇ ಶಿಶ್ನ ಮತ್ತು ಮೂತ್ರನಾಳ ಇಲ್ಲದ ಗಂಡು ಮಗುವಿಗೆ ಈ ಕೊರತೆಯನ್ನು ನೀಗಿಸಿದ ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
 ಶಿಶ್ನ ಮತ್ತು ಮೂತ್ರನಾಳ ಇಲ್ಲದಿರುವುದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣ. ಜಗತ್ತಿನಾದ್ಯಂತ ಇಷ್ಟರವರೆಗೆ ಕೇವಲ 80 ಮಕ್ಕಳಲ್ಲಿ ಮಾತ್ರ ಇಂಥ ತೊಂದರೆ ಕಂಡುಬಂದಿದೆ.
 7 ವಷದ ಸಂತೋಷ (ಹೆಸರು ಬದಲಾಯಿಸಲಾಗಿದೆ) ಎಂಬ ಈ ಹುಡುಗನಿಗೆ ಮೂತ್ರದ್ವಾರ ಇಲ್ಲದೆ ಮೂತ್ರವು ಗುದದ್ವಾರದ ಹತ್ತಿರದ ಒಂದು ಸಣ್ಣ ರಂಧ್ರದಲ್ಲಿ ಹರಿದು ಹೋಗುತಿತ್ತು. ಗಾಬರಿಯಾದ ಹೆತ್ತವರು ಹುಬ್ಬಳ್ಳಿಯಲ್ಲಿ ಇದಕ್ಕೆ 2 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದರೂ ಅದು ಫಲಕಾರಿಯಾಗಿರಲಿಲ್ಲ, ಬದಲಿಗೆ ಗುದದ್ವಾರದ ಬಳಿ ಇದ್ದ ಸಣ್ಣ ರಂಧ್ರವೂ ಮುಚ್ಚಿಹೋಗಿ ಮಗುವಿನ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದವು. ಇಂಥ ಪರಿಸ್ಥಿತಿಯಲ್ಲಿ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾದಾಗ ವೈದ್ಯರಿಗೆ ಕಿಡ್ನಿಗಳನ್ನು ಸರಿಪಡಿಸುವ ಮತ್ತು ಮೂತ್ರದ್ವಾರವನ್ನು ಸರಿಪಡಿಸುವ 2 ಸವಾಲುಗಳಿದ್ದವು.
 ಮೊದಲು ಒಂದು ಶಸ್ತ್ರಕ್ರಿಯೆ ನಡೆಸಿ ಎರಡೂ ಮೂತ್ರಪಿಂಡಗಳನ್ನು ಸರಿಸ್ಥಿತಿಗೆ ತರಲಾಯಿತು. ಆಮೇಲೆ ನಡೆದ ಮತ್ತೊಂದು ಶಸ್ತ್ರಕ್ರಿಯೆಯಲ್ಲಿ ಮಗುವಿನ ಕರುಳಿನಿಂದಲೇ ಸಿದ್ಧಪಡಿಸಿದ ಮೂತ್ರನಾಳವನ್ನು ಮೂತ್ರಕೋಶದ ಕೆಳಗೆ ತಂದು ಮೂತ್ರಕೋಶದ ಕುತ್ತಿಗೆ ಭಾಗಕ್ಕೆ ಜೋಡಿಸಲಾಯಿತು. 6 ಗಂಟೆಗಳ ಕಾಲ ನಡೆದ ಈ ಅಪರೂಪದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಪ್ರೊ.ಡಾ. ವಿಜಯ ಕುಮಾರ್ ಮತ್ತು ಅವರ ಸಹಾಯಕರಾದ ಡಾ. ಸಂತೋಷ್, ಡಾ. ಸಂದೀಪ್, ಡಾ. ವಿಕ್ರಮ್ ಮತ್ತು ಡಾ. ಸಿಜೋಜಾನ್ ಯಶಸ್ವಿಯಾಗಿ ನಡೆಸಿದ್ದಾರೆ.  ಇದೀಗ ಮಗುವು ಎದುರುಗಡೆಯಿಂದ ಮೂತ್ರ ಮಾಡುತ್ತಿದ್ದು ಹೆತ್ತವರ ಮುಖದಲ್ಲಿ ಸಂತಸ ತಂದಿದೆ ಎಂದು ಆಸ್ಪತ್ರೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.