ದಕ್ಷಿಣ ಕನ್ನಡ

ಪತ್ನಿ ನೆರೆಮನೆ ಯುವಕನ ಜತೆ ಪರಾರಿ ಇಬ್ಬರು ಮಕ್ಕಳ ಕೊಂದು ಪತಿ ಆತ್ಮಹತ್ಯೆ

Published On :

ಮಂಗಳೂರು: ಪತ್ನಿ ತನ್ನನ್ನು ಬಿಟ್ಟು ಪರಾರಿಯಾದ ನೋವಿನಿಂದ ತಲಪಾಡಿ ಮೂಲದ ವ್ಯಕ್ತಿ ಮುಂಬೈಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ.
ಮಕ್ಕಳಾದ ಶ್ರದ್ಧಾ (9) ಸಾಯಿ ದಯಾ (3)ರನ್ನು ಕೊಂದು ತಲಪಾಡಿ ಶ್ರೀಧರ ಐತಪ್ಪ ರೈ (42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ತನಗೆ ವಂಚಿಸಿ ಪಕ್ಕದ ಮನೆಯವನ ಜತೆ ಓಡಿ ಹೋಗದೆ ಇದ್ದಿದ್ದರೆ ತಾನು ಇಂಥ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ ಎಂದು ಗೋಡೆಯಲ್ಲಿ ಡೆತ್‌ನೋಟ್ ಬರೆದಿದ್ದಾನೆ.
ಪ್ರಕರಣದ ವಿವರ: ಶ್ರೀಧರ ಐತಪ್ಪ ರೈ ಮುಂಬೈ ನಲಸೋಪರ ಪೂರ್ವದ ಗಣೇಶ್ ಶಾಪಿಂಗ್ ಮಾಲ್ ಸಾಯಿಧಾಮದ ಎರಡನೇ ಮಹಡಿಯಲ್ಲಿ ಹೆಂಡತಿ ಸೋನಾಲ್ ಶೆಟ್ಟಿ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಮೂಡುಬಿದಿರೆ ಮೂಲದ ಹೆಲನ್‌ಳನ್ನು ಪ್ರೀತಿಸಿ ಮದುವೆಯಾಗಿದ್ದು, ಪತ್ನಿ ಸೋನಾಲ್ ಶೆಟ್ಟಿಯಾಗಿ ಬಂಟ ಜಾತಿಗೆ ಸೇರಿದ್ದಳು.
ಶ್ರೀಧರ ರೈ ಬೆಳಗ್ಗೆ ಕೆಲಸಕ್ಕೆ ಹೋದರೆ ರಾತ್ರಿಯೇ ಬರುವುದು. ಆಗ ಪತ್ನಿ ಮತ್ತು ಸಣ್ಣ ಮಗು ಮಾತ್ರ ಮನೆಯಲ್ಲಿ ಇರುತ್ತಿತ್ತು. ಎದುರುಗಡೆ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ ತೇಜಸ್ ಅನುಪ್ ಜೋಶಿ ಎಂಬಾತನೊಂದಿಗೆ ಸೋನಾಲ್‌ಗೆ ಸಲುಗೆ ಬೆಳೆದಿತ್ತು. ಬರ ಬರುತ್ತಾ ಪ್ರೀತಿಯಾಗಿ ಬದಲಾಗಿದ್ದು, ಪ್ರೇಮಿಗಳ ದಿನದಂದು ಇಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ದರು. ಅಂದು ರಾತ್ರಿ ಶ್ರೀಧರ ಐತಪ್ಪ ರೈ ಮನೆಗೆ ಬಂದಾಗ ಇಬ್ಬರು ಮಕ್ಕಳು ಅಳುತ್ತಾ ಕುಳಿದ್ದರು.
ಮಕ್ಕಳ ದುಃಖ:  ಪತ್ನಿಯನ್ನು ಸಾಕಷ್ಟು ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ನೆರೆಮನೆಯ ಯುವಕನ ಜತೆ ಪರಾರಿಯಾಗಿರುವುದು ತಿಳಿದು ಬಂತು. ಮಕ್ಕಳು ಪ್ರತಿ ಬಾರಿ ತಾಯಿಯ ನೆನಪಲ್ಲಿ ಆಳುತ್ತಿರುವುದರಿಂದ ತಂದೆ ವಿಚಲಿತನಾಗಿದ್ದ. ಮಕ್ಕಳನ್ನು ಸಮಧಾನ ಪಡಿಸಲು ಸಾಧ್ಯವಾಗದೆ ಪರಿತಪಿಸಿದ್ದಾನೆ.
ಫೆ.18ರಂದು ಮನೆಯಲ್ಲಿ ಉಳಿದ ಶ್ರೀಧರ, ಮಕ್ಕಳು ಮಲಗಿದ್ದ ವೇಳೆ ಅವರನ್ನು ತಲೆದಿಂಬು ಒತ್ತಿ ಕೊಂದಿದ್ದಾನೆ. ಪತ್ನಿಯ ಚೂಡಿದಾರ್ ಶಾಲ್‌ನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರುದಿನ ಮಧ್ಯಾಹ್ನ ವೇಳೆ ನಾದಿನಿ ಮನೆಗೆ ಬಂದಾಗ ಬಾಗಿಲು ಮುಚ್ಚಿತ್ತು. ಸಂಜೆ ವೇಳೆ ಬಂದಾಗಲೂ ಬಾಗಿಲು ತೆರೆದಿರಲ್ಲಿಲ. ಸಂಶಯಗೊಂಡು ಬಳಿಕ ನೆರೆಮನೆಯವರು ಸಹಕಾರದಿಂದ ಮನೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಗೋಡೆಯಲ್ಲಿ ಹಿಂದಿ ಡೆತ್‌ನೋಟ್: ಶ್ರೀಧರ ಶೆಟ್ಟಿ ಗೋಡೆಯಲ್ಲಿ ಎರಡು ಕಡೆ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಬರೆದಿದ್ದಾನೆ.  'ನನ್ನ ಹೆಂಡತಿ ಜತೆಗಿದ್ದರೆ ನಾನು ಈ ಕೃತ್ಯ ಎಸಗುತ್ತಿರಲಿಲ್ಲ' ಇನ್ನೊಂದೆಡೆ 'ನನ್ನ ಪತ್ನಿ ನೆರೆ ಮನೆಯವನ ಜತೆ ಓಡಿ ಹೋಗಿದ್ದಾಳೆ. ಹೀಗಾಗಿ ನಾನು ಈ ಕೃತ್ಯ ಎಸಗಿದ್ದೇನೆ' ಎಂದು ಬರೆದಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.