ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ನಡೀತು ಚದುರಂಗ ಪಂದ್ಯಾವಳಿ
ಮಂಗಳೂರು: ಮಂಗಳೂರು ಕಾರಾಗೃಹದಲ್ಲಿ ಭಾನುವಾರ ಕೈದಿಗಳಿಗೆ ಚೆಸ್ ಪಂದ್ಯಾವಳಿ ನಡೆಯಿತು. 25 ಮಂದಿ ಕೈದಿಗಳು ಪಂದ್ಯದಲ್ಲಿ ಪಾಲ್ಗೊಂಡಿದ್ದು, ಟ್ರೋಫಿ ಜತೆಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಘೋಷಿಸಲಾಗಿತ್ತು.
ಅಪಘಾತ ಪ್ರಕರಣದ ಆರೋಪಿ ಮೂಡಿಗೆರೆ ರವಿ ಪ್ರಥಮ ಸ್ಥಾನ ಪಡೆದು ರು. 3 ಸಾವಿರ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡ. ಕುಳಾಯಿ ಸಿಂಡಿಕೇಟ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಅಂಜನಾ ಕೊಲೆ ಪ್ರಕರಣದ ಆರೋಪಿ ಮಹಾರಾಷ್ಟ್ರದ ಮಹೇಶ್ ದ್ವಿತೀಯ ಸ್ಥಾನ ಗಳಿಸಿ ರು. 2 ಸಾವಿರ ಮೊತ್ತ ಮತ್ತು ಟ್ರೋಫಿ ತನ್ನದಾಗಿಸಿಕೊಂಡ. ತೃತೀಯ ಸ್ಥಾನ ರು. 1 ಸಾವಿರ ಹಾಗೂ ಟ್ರೋಫಿಯನ್ನು ಹಾಸನದ ಗೋಪಾಲ್ಗೆ. ಹಂಝ ಮತ್ತು ಸೂರ್ಯ ಕುಮಾರ್ ತಲಾ ರು. 500 ರಂತೆ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಈ ಪಂದ್ಯಾವಳಿಯನ್ನು ಕರ್ನಾಟಕ ಸರ್ಕಾರ ಮತ್ತು ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿತ್ತು. ಈ ಸಂದರ್ಭ ಚೆಸ್ ಅಸೋಸಿಯೇಶನ್ನ ಮಾಸಿಕ ಸಂಚಿಕೆ 'ಇಶ್ಯೂಸ್ ಆಫ್ ಕರ್ನ್ಸ್ನ್'ನ್ನು ಜೈಲ್ ಸುಪರಿಂಟೆಂಡೆಂಟ್ ರಮೇಶ್ ಪಿ.ಎಸ್. ಬಿಡುಗಡೆಗೊಳಿಸಿದರು.
ಪಂದ್ಯಾವಳಿಯ ಬಗ್ಗೆ ಅನಿಸಿಕೆ ಹಂಚಿಕೊಂಡ ನಕ್ಸಲ್ ಆರೋಪಿ, ಚೆನ್ನೈನ ಶೇಖರ್, ಪ್ರಸ್ತುತ ನಾವು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿರುತ್ತೇವೆ. ಇಂಥ ಸ್ಪರ್ಧೆಗಳಲ್ಲಿ ತಲ್ಲೀನಗೊಂಡ ಮನಸ್ಸು ನಿರಾಳವಾಗುತ್ತದೆ ಎಂದರು. ಅವಳಿ ಕೊಲೆ ಪ್ರಕರಣದ ಆರೋಪಿ ಆಕಾಶಭವನದ ರಾಜೇಶ್ ಪೂಜಾರಿ, ಪಂದ್ಯಾವಳಿ ಮನಸ್ಸನ್ನು ತಿಳಿಗೊಳಿಸಿ, ಪರಿವರ್ತನೆಗೆ ಸಹಕರಿಸುತ್ತದೆ ಎಂದರು.
ಜಿಲ್ಲಾ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಎನ್.ಎಸ್. ಪಾಟೀಲ್ ವಿಜೇತರಿಗೆ ಬಹುಮಾನ ವಿತರಿಸಿದರು.
ಯುನೈಟೆಡ್ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಎಂ.ಎಸ್. ಗುರುರಾಜ್, ಗೌರವಾಧ್ಯಕ್ಷ ಎಂ.ಆರ್. ವಾಸುದೇವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

