ದಕ್ಷಿಣ ಕನ್ನಡ

ಶೀಘ್ರ ಮಾನವ ಸಹಿತ ಬಾಹ್ಯಾಕಾಶ ಯಾನ

Published On :

ಮಂಗಳೂರು: ವೈಜ್ಞಾನಿಕ ರಂಗದಲ್ಲಿ ಭಾರತ ಮತ್ತೊಂದು ಹೆಜ್ಜೆ ಗುರುತು ಮೂಡಿಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೆರಡು ವರ್ಷಗಳಲ್ಲಿ ಭಾರತ ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡಲಿದೆ.
ಇದಕ್ಕಾಗಿಯೇ ಮೂರು ಪಟ್ಟು ಹೆಚ್ಚು ಸಾಮರ್ಥ್ಯದ ಕ್ರಯೋಜೆನಿಕ್ ಜಿಎಸ್ಎಲ್ವಿ ಮಾರ್ಕ್ 3 ಉಪಗ್ರಹ ಉಡ್ಡಯನಕ್ಕೆ ಸಿದ್ಧಗೊಳಿಸಲಾಗುತ್ತಿದೆ. ಎರಡು ವರ್ಷದ ಬಳಿಕ ಮೂವರು ಮಾನವರನ್ನು ಒಯ್ಯುವ ಸಾಮರ್ಥ್ಯದ ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ಮೂಲಕ ಉಪಗ್ರಹ ಉಡ್ಡಯನ ಮಾಡಲು ಸಿದ್ಧತೆ ನಡೆದಿದೆ.
ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ಅಧಿಕೃತ ಕಾರ್ಯಕ್ರಮ ಈಗ ಇಲ್ಲ. ಆದರೆ ಅದಕ್ಕೆ ಪೂರಕವಾಗಿ ರಾಕೆಟ್ ಜತೆ ಮಾನವರನ್ನು ಕಳುಹಿಸುವ ಜಿಎಸ್ಎಲ್ವಿ ಮಾರ್ಕ್ 3 ಅಭಿವೃದ್ಧಿಗೊಳಿಸಲಾಗುತ್ತಿದೆ. ಲ್ಯಾಬ್ನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಪಿಎಸ್ಎಲ್ವಿಯಲ್ಲಿ ಒಬ್ಬ ಯಾನಿ, ಜಿಎಸ್ಎಲ್ವಿಯಲ್ಲಿ 2 ಮಂದಿ ಒಯ್ಯಬಹುದು. ಮೂರು ಪಟ್ಟು ಹೆಚ್ಚಿನ ಸಾಮರ್ಥ್ಯ ಜಿಎಸ್ಎಲ್ವಿ ಮಾರ್ಕ್ 3ಯಲ್ಲಿ ಕ್ರಯೊಜಿನಿಕ್ ಹಂತ ಅಳವಡಿಸಿದ್ದು, ಮೂರು ಮಂದಿ ಮಾತ್ರವಲ್ಲದೆ 3 ಟನ್ ಲ್ಯಾಬೊರೇಟರಿಯನ್ನು ಒಯ್ಯಬಹುದು ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ತಿಳಿಸಿದ್ದಾರೆ. ಸೋಮವಾರ ಮಂಗಳೂರು ವಿವಿ ಘಟಿಕೋತ್ಸವ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಮಂಗಳಯಾನಕ್ಕಿಂತ ಚಂದ್ರಯಾನ ಕಷ್ಟ. ಪ್ರತಿ 26 ತಿಂಗಳಿಗೊಮ್ಮೆ ಚಂದ್ರ ಭೂಮಿಗೆ ಹತ್ತಿರವಾಗುತ್ತಾನೆ. ಹೀಗಾಗಿ ಇನ್ನೆರಡು ವರ್ಷ ಚಂದ್ರಯಾನಕ್ಕೆ ಸಿದ್ಧತೆ ನಡೆಸಲು ಸಮಯ ಇದೆ. ಭಾರತೀಯರಲ್ಲಿ ಧೀ ಶಕ್ತಿ ಇದೆ. ಮುಂದಕ್ಕೆ ಇದೇ ಧೀ ಶಕ್ತಿ ವಿಶ್ವವನ್ನು ಆಳಲಿದೆ ಎಂದು ವಿವೇಕಾನಂದರು ಹೇಳಿದ್ದಾರೆ. ಮಂಗಳೂರು ವಿವಿಯಲ್ಲಿ ಕಲಿತ ವಿದ್ಯಾರ್ಥಿಗಳು ಬಾಹ್ಯಾಕಾಶ ಯೋಜನೆಯಲ್ಲಿ ಭಾವಹಿಸುತ್ತಿದ್ದಾರೆ. ಭಾಗವಹಿಸುವಿಕೆ ಹೆಚ್ಚಿದರೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ನೇತೃತ್ವ ವಹಿಸುವ ಅವಕಾಶ ಉಜ್ವಲವಾಗಿದೆ ಎಂದರು.
ವಿಶ್ವದ ಮೊದಲ ದೇಶ: ಸಮುದ್ರದ ಅಲೆಗಳ ಎತ್ತರವನ್ನು ಕಂಡು ಹಿಡಿಯಲು ಉಪಗ್ರಹ ನೆರವಾಗುತ್ತಿದೆ. ಹವಾಮಾನ, ಇಬ್ಬನಿ ಅಳೆಯಲು ಭಾರತ ಒಂದು ಉಪಗ್ರಹವನ್ನೇ ಉಡ್ಡಯನ ಮಾಡಿದೆ. ಈ ರೀತಿ ಹವಾಮಾನಕ್ಕೆ ಮಾತ್ರ ಉಪಗ್ರಹ ಬಳಸುತ್ತಿರುವುದು ವಿಶ್ವದಲ್ಲಿ ಭಾರತ ಮಾತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉಪಗ್ರಹ ಸ್ವತಂತ್ರ ಉಡ್ಡಯನ ನಡೆಸುವ ವಿಶ್ವದ ನಾಲ್ಕನೇ ದೇಶ ಭಾರತ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.