ದಕ್ಷಿಣ ಕನ್ನಡ

ಆತ್ಮಹತ್ಯೆ ಬೆದರಿಕೆ: ಅನಾಮಿಕ ಯುವತಿಯಿಂದ ಪೊಲೀಸರಿಗೆ ಹುಸಿ ಕರೆ

Published On :

ಪುತ್ತೂರು: ತಾನು ಪ್ರೀತಿಸುತ್ತಿದ್ದ ಯುವಕ ತನಗೆ ಕೈಕೊಟ್ಟಿದ್ದಾನೆ. ಇಲ್ಲಿನ  ಜವುಳಿ ಅಂಗಡಿಯೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಯುವತಿಯೊಬ್ಬಳು ಐಜಿಪಿಗೆ ದೂರವಾಣಿ ಕರೆ ಮಾಡಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಘಟನೆ ಬುಧವಾರ ರಾತ್ರಿ ಪುತ್ತೂರಿನಲ್ಲಿ ನಡೆದಿದೆ.
 ಅನಾಮಿಕ ಯುವತಿಯೊಬ್ಬಳು ಪಶ್ಚಿಮ ವಲಯ ಐಜಿಪಿಗೆ ಮತ್ತು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ತಾನು ಪ್ರೀತಿಸುತ್ತಿದ್ದ ಯುವಕ ತನಗೆ ಕೈಕೊಟ್ಟಿದ್ದಾನೆ. ತಾನು ಇಲ್ಲಿನ ಜವುಳಿ ಅಂಗಡಿಯೊಂದರ ಒಳಗೆ ಅವಿತುಕೊಂಡಿದ್ದು, ರಾತ್ರಿ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಳು.
 ಯುವತಿಯ ಪ್ರಾಣ ರಕ್ಷಣೆಯ ದೃಷ್ಟಿಯಿಂದ ತಕ್ಷಣವೇ ಸ್ಪಂದಿಸಿದ ಐಜಿಪಿ, ಯುವತಿಯನ್ನು ರಕ್ಷಿಸುವಂತೆ ಪುತ್ತೂರು ವಿಭಾಗದ ಡಿವೈಎಸ್ಪಿ ಎಚ್.ಡಿ. ಮೆಂಡೋನ್ಸಾ ಅವರಿಗೆ ಸೂಚಿಸಿದ್ದರು.
 ಐಜಿಪಿ ಸೂಚನೆಯಂತೆ ಡಿವೈಎಸ್ಪಿ ಮೆಂಡೋನ್ಸಾ ನಗರ ಠಾಣೆಯ ಅಪರಾಧ ವಿಭಾಗದ ಎಸ್‌ಐ ಐತ್ತಪ್ಪ ಮತ್ತು ಜಯಶ್ರೀ ಶ್ಯಾನ್‌ಬೋಗ್ ಹಾಗೂ ಸಿಬ್ಬಂದಿ ಜವುಳಿ ಅಂಗಡಿಗೆ ತೆರಳಿ ಬಂದ್ ಮಾಡಲಾಗಿದ್ದ ಜವುಳಿ ಅಂಗಡಿಯ ಬಾಗಿಲು ತೆರೆಸಿ, ಅಂಗಡಿ ಮಾಲೀಕರ ಸಮಕ್ಷಮದಲಿ ಪರಿಶೀಲನೆ ನಡೆಸಿದರು. ಆದರೆ, ಅಂಗಡಿಯೊಳಗೆ ಯುವತಿ ಇರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.