ಅಪ್ರಾಪ್ತೆ ವಿವಾಹಕ್ಕೆ ಸಿದ್ಧತೆ: ಸಿಡಿಪಿಒ ಕಾರ್ಯಚರಣೆ
ಉಪ್ಪಿನಂಗಡಿ: ಯುವತಿಗೆ ಹದಿನೆಂಟು ವರ್ಷ ಪೂರ್ಣಗೊಳ್ಳುವ ಮೊದಲೇ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಪುತ್ತೂರು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡ ಪ್ರಕರಣ ಶಿರಾಡಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಶಿರಾಡಿ ಗ್ರಾಮದ ಪೇರಮಜಲು ನಿವಾಸಿ ಅನಿಲ್ ಕುಮಾರ್ ಹಾಗೂ ರಾಗಿನಿ ದಂಪತಿ 16 ವರ್ಷದ ಪುತ್ರಿಯನ್ನು ಇದೇ ಪರಿಸರದ ನಿವಾಸಿ ಭಾಸ್ಕರ ಹಾಗೂ ಅಮ್ಮಣ್ಣಿ ದಂಪತಿ ಪುತ್ರ ಪ್ರಸಾದ್(22) ಎಂಬವರೊಂದಿಗೆ ವಿವಾಹ ಮಾಡಿಕೊಡಲು ಸಿದ್ಧತೆ ನಡೆದಿತ್ತು.
ಈ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆಯ ಬೆಂಗಳೂರಿನ ನಿರ್ದೇಶಕರ ಕಚೇರಿಗೆ ಯಾರೋ ಮಾಹಿತಿ ನೀಡಿದ್ದರು. ಅಲ್ಲಿಂದ ಮಂಗಳೂರಿನ ಕಚೇರಿಗೆ ಇ ಮೇಲ್ ಮೂಲಕ ಮಾಹಿತಿ ರವಾನಿಸಲಾಗಿತ್ತು.
ಅಲ್ಲಿಂದ ಪುತ್ತೂರು ಸಿಡಿಪಿಒ ಕಚೇರಿಗೆ ಇ ಮೇಲ್ ಮೂಲಕ ಮಾಹಿತಿ ರವಾನಿಸಿ ಅಪ್ರಾಪ್ತೆಗೆ ನಡೆಯುವ ವಿವಾಹ ರದ್ದುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಿಡಿಪಿಒ ಶಾಂತಿ ಟಿ. ಹೆಗ್ಡೆ, ಅಂಗನವಾಡಿ ಮೇಲ್ವಿಚಾರಕಿ ಉಮಾವತಿ, ಶಿರಾಡಿ ಗ್ರಾಮಕರಣಿಕ ರವಿಕುಮಾರ್, ಅಂಗನವಾಡಿ ಕಾರ್ಯಕರ್ತೆ ಸುಮಾವತಿ, ಆಶಾ ಕಾರ್ಯಕರ್ತೆ ಶೋಭಾರೊಂದಿಗೆ ಯುವತಿ ಹಾಗೂ ಯುವಕನ ಮನೆಗೆ ತೆರಳಿ ಯುವತಿಗೆ 18 ವರ್ಷ ಪೂರ್ಣಗೊಳ್ಳದೇ ವಿವಾಹ ಮಾಡಿಕೊಡುವುದಿಲ್ಲ ಎಂದು ಇಬ್ಬರ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

