ದಕ್ಷಿಣ ಕನ್ನಡ

ಅಪರಾಧಿಗಳ ಜಾತಿ, ಧರ್ಮ ನೋಡಿ ಸರ್ಕಾರದಿಂದ ರಕ್ಷಣೆ: ಸಿ.ಟಿ. ರವಿ ಆರೋಪ

Published On :

ಮಂಗಳೂರು: ಅಪರಾಧ ಮಾಡಿದವರ ಜಾತಿ, ಧರ್ಮ ನೋಡಿ ಕ್ರಮ ಕೈಗೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿ ಕೋಮು ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.
 ಕೊಣಾಜೆ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ ಬ್ಲ್ಯಾಕ್ಮೇಲ್ ಸಹಿತ ಸರಣಿ ಪ್ರಕರಣಗಳು ನಡೆದಿದ್ದು, ಸರ್ಕಾರ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
 ಕೊಣಾಜೆ ವಿದ್ಯಾರ್ಥಿನಿಯ ಅತ್ಯಾಚಾರ ಮಾಡಿಸಿ, ಬ್ಲೂಫಿಲಂ ತೆಗೆದು, ಬ್ಲ್ಯಾಕ್ಮೇಲ್ ಮಾಡಿ ಬರ್ಬರ ಕೃತ್ಯ ನಡೆಸಿದ್ದರೂ ಕೂಡಾ ಅತ್ಯಾಚಾರ ಪ್ರಕರಣ ಐಪಿಸಿ ಸೆ.375, 376 ದಾಖಲಾಗಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿಲ್ಲ. ಈ ಕೆಲಸ ಮಾಡದಂತೆ ಪೊಲೀಸರನ್ನು ತಡೆಯಲು ಯಾರ ಕೈವಾಡ ಇದೆ.
 ಕರಾವಳಿಯಲ್ಲಿ 3 ಸಾವಿರ ಹೆಣ್ಣುಮಕ್ಕಳು ನಾಪತ್ತೆ ಪ್ರಕರಣಗಳಿಗೂ ಇದಕ್ಕೂ ಸಂಬಂಧ ಇದೆ. ಹೆಣ್ಣುಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆ ತಳ್ಳುವ, ಲವ್ ಜಿಹಾದ್ ಮತಾಂತರ ಜಾಲ, ಡ್ರಗ್ ಮಾಫಿಯಾ ಇದೆ. ಕೊಣಾಜೆಯಲ್ಲಿ ಇನ್ನೊಂದು ಅತ್ಯಾಚಾರ, ಬಂಟ್ವಾಳದ ಜಯರಾಮ ಪೂಜಾರಿ ಮರ್ಮಾಂಗ ಕತ್ತರಿಸಿದ್ದು, ಗಣಿ ಮಾಫಿಯಾ ವಿರುದ್ಧ ಸಾಕ್ಷಿ ಹೇಳಿದ್ದಕ್ಕೆ ಉದ್ಯಮಿ ನಾಯ್ಕ್ ಹತ್ಯೆ ಹೀಗೆ ಕರಾವಳಿಯಲ್ಲಿ ಸರಣಿ ದೌರ್ಜನ್ಯ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಆಡಳಿತ ಪಕ್ಷದಲ್ಲಿ ಇಲ್ಲಿ ಉಸ್ತುವಾರಿ ಸಚಿವನಾಗಿದ್ದೆ, ಪಡೀಲ್ ಹೋಮ್ ಸ್ಟೇ ಪ್ರಕರಣ ನಡೆದಿತ್ತು. ಅವತ್ತು ಕಾಂಗ್ರೆಸ್ ಮುಖಂಡರು ಹೇಳಿದ್ದನ್ನು ಮರೆತಿರಬಹುದು. 'ನೈತಿಕ ಹೊಣೆ ಹೊತ್ತು, ಗೃಹಸಚಿವರು ರಾಜಿನಾಮೆ ಕೊಡಬೇಕು' ಎಂದು ಹೇಳುತ್ತಿದ್ದವರು ಈಗ ಯಾರ ರಾಜೀನಾಮೆ ಕೇಳುತ್ತೀರಿ? ಕಾಂಗ್ರೆಸ್ ಇಲ್ಲಿ ಕೇಸ್ ದುರ್ಬಲಗೊಳಿಸುವ ಪ್ರಯತ್ನ ನಡೆಸಿದೆ. ಈಗ ನೈತಿಕ ಪೊಲೀಸ್ ಗಿರಿ ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ, ಆದರೆ ಕ್ರಿಮಿನಲ್ಗಳನ್ನು ರೇಪಿಸ್ಟ್ಗಳನ್ನು ಸಹಿಸಿ, ರಕ್ಷಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
 ಪ್ರತಿಭಟನೆ ಮಾಡುವವರಿಗೆ ಗೂಂಡಾ ಕಾಯ್ದೆ ಹಾಕಬೇಕು ಹೇಳುವ ಕಾಂಗ್ರೆಸ್ಸಿಗರು, ಈ ರೇಪಿಸ್ಟ್ಗಳನ್ನು ಬಿಟ್ಟು ಬಿಡುವುದು ಏಕೆ. ದೇರಳಕಟ್ಟೆ ಪ್ರಕರಣದಲ್ಲಿ ಪರಿಷ್ಕೃತ ಎಫ್ಐಆರ್ ಹಾಕದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ. ಈಗಾಗಲೇ ಪೊಲೀಸ್ ಕಮಿಷನರ್ಗೆ ಮನವಿ ನೀಡಿ ಬಂದಿದ್ದೇವೆ.  
 ರೇಪ್ ಆಗಬಾರದು ಎಂಬ ದೃಷ್ಟಿಯಿಂದ ಹೋಮ್ ಸ್ಟೇ ದಾಳಿ ನಡೆಯಿತು. ಅದಕ್ಕೆ ಮಾಧ್ಯಮಗಳು 56 ಗಂಟೆ ಸತತ ಪ್ರಚಾರ ನೀಡಿದವು. ಆದರೆ ಇಲ್ಲಿ ರೇಪ್ ಆಗಿದೆ. ಮಾಧ್ಯಮಗಳು ಸಣ್ಣ ಸುದ್ದಿ ಮಾಡಿ ಬಿಟ್ಟಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕ್ಯಾ.ಗಣೇಶ್ ಕಾರ್ಣಿಕ್, ಬಿಜೆಪಿ ನಗರಾಧ್ಯಕ್ಷ ಶ್ರೀಕರ ಪ್ರಭು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.