ದಕ್ಷಿಣ ಕನ್ನಡ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಶುದ್ಧಗೊಳಿಸಲು ಯುವಜನತೆಯಿಂದ ಸಾಧ್ಯ: ನ್ಯಾ. ಹೆಗ್ಡೆ

Published On :

ಮಂಗಳೂರು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮಲಿನವಾಗಿದೆ, ಇದನ್ನು ಶುದ್ಧಗೊಳಿಸಲು ಯುವಜನತೆಯಿಂದ ಮಾತ್ರ ಸಾಧ್ಯ. ಅಧಿಕಾರಕ್ಕೆ ಅಂಟಿಕೊಂಡಿರುವ ಹಿರಿಯರು ಬಿಡುವುದಿಲ್ಲ. ಆದರೆ ಇತ್ತೀಚೆಗೆ ನಡೆದ ದಿಲ್ಲಿ ಚುನಾವಣೆ ಫಲಿತಾಂಶ ನೋಡಿ, ಅಲ್ಲಿ ಕಿರಿಯರ ಕೈಗೆ ಅಧಿಕಾರ ಬಂದಿದೆ. ಅದನ್ನು ನೀಡಿದ್ದು ಯುವ ಮತದಾರರೇ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.
 ರೋಶನಿ ನಿಲಯದಲ್ಲಿ ಯುವಜನತೆ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ದಿಲ್ಲಿಯ ಸಚಿವ ಸಂಪುಟದಲ್ಲಿ ಹಿರಿಯ ಎಂದರೆ 49 ವರ್ಷದವರು, ಕಿರಿಯಾಕೆ 26 ವರ್ಷ, 30ರಿಂದ 40 ವರ್ಷದವರಿಗೆ ಅಧಿಕಾರ ಸಿಕ್ಕಿದೆ. ಅವರಿಗೆ ಅವಕಾಶ ನೀಡಿದ್ದು, ಹಿರಿಯ ಮತದಾರರು ಅಲ್ಲ, ಯುವ ಮತದಾರರು. ಈ ಬದಲಾವಣೆ ತರಲು ಯುವಜನತೆಯಿಂದ ಮಾತ್ರ ಸಾಧ್ಯ. ಹಿರಿಯರು ದಾರಿ ಬಿಡುತ್ತಾರೆ ಎಂದು ಕಾಯಬೇಡಿ, ನೀವೇ ದಾರಿ ಮಾಡಿಕೊಂಡು ಮುಂದೆ ನಡೆಯಿರಿ.
ಎಲ್ಲಿ ಸಮಾಜ ನ್ಯಾಯ ಇದೆ ಜನ ಹೇಳುತ್ತಿದ್ದ ಕಾಲ ಇತ್ತು. ಇವತ್ತು ಯಾವ ರೀತಿಯಲ್ಲಿ ಬದಲಾಗುತ್ತಿದೆ. ಸಂವಿಧಾನದಲ್ಲಿ ಮೂರು ಅಂಗಗಳಲ್ಲಿ ಮೌಲ್ಯ ಕುಸಿತವಾಗಿದೆ. ಸರಿಯಾದ ಸಮಯದಲ್ಲಿ ಸರಿಪಡಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಿಂದೆಯೇ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇತ್ತು. ಆದರೆ ಆಗ ಮುಖ್ಯನ್ಯಾಯಮೂರ್ತಿಗಳ ಬಳಿಗೆ ಇಂಥ ಪ್ರಕರಣಗಳ ಬಂದಾಗ 'ನನ್ನ ಕಾಲದಲ್ಲಿ ಬೇಡ' ಎಂದು ಮುಚ್ಚಿ ಹಾಕಿದರು. ಇದರಿಂದ ಭ್ರಷ್ಟಾಚಾರ ಹೆಚ್ಚಳವಾಯಿತು. ಇದನ್ನು ಹೊಡೆದು ಹಾಕಬೇಕು. ನಿಜವಾಗಿಯೂ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ ಪ್ರಕರಣ ನಡೆದಿದ್ದರೆ ಶಿಕ್ಷೆ ಯಾಗಬೇಕು ಎಂದರು.
 ಬಡವರಿಗೆ ಅವಕಾಶ ಇಲ್ಲ ಎನ್ನುವುದು ತಪ್ಪು. ಅವಕಾಶ  ಬಳಸಿಕೊಳ್ಳುವುದಿಲ್ಲ. ಇವೆಲ್ಲ ನನ್ನಿಂದ ಸಾಧ್ಯವಿಲ್ಲ, ಎಲ್ಲರೂ ತುಳಿಯುತ್ತಾರೆ ಎಂಬ ಭಾವನೆ ಇರಬಾರದು. ಲಾಲ್‌ಬಹುದ್ದೂರ್ ಶಾಸ್ತ್ರಿ ತುಂಬಾ ಬಡತನದಿಂದ ಬಂದು ಪ್ರಧಾನಿಯಾದರು. ನೀವೂ ಪ್ರಾಮಾಣಿಕತೆಯಿಂದ ಯಶಸ್ಸು ಪಡೆಯಿರಿ.
ಬಡವರಿಗೆ ಮಾತ್ರ ಲೋಕಸಭೆ ಸೀಟು ಸಿಗಬೇಕು, ಅಧಿಕಾರ ಸಿಗಬೇಕು ಎನ್ನುವುದು ಸರಿಯಲ್ಲ. ಎಲ್ಲರೂ ಪ್ರಯತ್ನ ಮಾಡಬೇಕು. ಎಲ್ಲರೂ ಬದಲಾವಣೆಗೆ ಪ್ರಯತ್ನಿಸಬೇಕು. ಆಗ ಮಾತ್ರ ಸಾಮಾಜಿಕ ಬದಲಾವಣೆ ಬರುತ್ತದೆ.
ಈಗ ಶ್ರೀಮಂತರನ್ನು, ಅಧಿಕಾರಸ್ಥರನ್ನು ಜನರು ಪೂಜಿಸುತ್ತಿದ್ದಾರೆ. ಎಲ್ಲ ಪ್ರಶಸ್ತಿಗಳನ್ನು ಇಂಥ ಅಧಿಕಾರಸ್ಥರಿಗೆ ನೀಡುತ್ತಿದ್ದಾರೆ. ಇದರ ಹಿಂದೆ ಹೋಗಬಾರದು. ಅರ್ಹತೆ ಇದ್ದವರಿಗೆ ಮನ್ನಣೆ ನೀಡುವ ಪರಿಸ್ಥಿತಿ ಬರಬೇಕು.
65ವರ್ಷಗಳಲ್ಲಿಂದ ನಡೆದು ಬರುತ್ತಿರುವುದನ್ನು ಕೇವಲ ಎರಡು ವರ್ಷಗಳಲ್ಲಿ ಬದಲಾವಣೆ ತರುವುದು ಬಹಳ ಕಷ್ಟ, ಆದರೆ ಅಸಾಧ್ಯವಲ್ಲ ಎಂದರು.
 ಎ.ಬಿ. ಅಬ್ದುರ್ರೆಹಮಾನ್ ಕಾರ್ಯಾಗಾರ ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.