ಮೂಲ್ಕಿ ತಾ. ಹೋರಾಟ ಸಮಿತಿಯಲ್ಲಿ ಭಿನ್ನಮತ: ಹಲ್ಲೆ ವಿರುದ್ಧ ಚಾಲಕನ ಬೆಂಬಲಿಸಲು ಒತ್ತಡ
ಮೂಲ್ಕಿ: ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂನ ಸಭಾಂಗಣದಲ್ಲಿ ಜರಗಿದ ಮೂಲ್ಕಿ ತಾಲೂಕು ಹೋರಾಟ ಸಮಿತಿಯ ಸಭೆಯಲ್ಲಿ ಇತ್ತೀಚೆಗೆ ಮೂಲ್ಕಿಯಲ್ಲಿ ರಸ್ತೆ ದುರಸ್ತಿ ಬಗ್ಗೆ ನಡೆದ ಪ್ರತಿಭಟನಾ ಸಭೆಯಲ್ಲಿ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ರಿಕ್ಷಾ ಚಾಲಕನಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಕಾರು ಚಾಲಕರ ಸಂಘದ ಮಾಜಿ ಅಧ್ಯಕ್ಷ ಮಧು ಆಚಾರ್ಯ ಸಭೆಯಲ್ಲಿ ಒತ್ತಾಯಿಸಿದರು.
ತಾಲೂಕು ಹೋರಾಟ ಸಮಿತಿ ಕೇವಲ ತಾಲೂಕು ಹೋರಾಟಕ್ಕೆ ಮಾತ್ರ ಸೀಮಿತವಲ್ಲ. ಮೂಲ್ಕಿ ಹೋಬಳಿಯ 32 ಗ್ರಾಮಗಳಲ್ಲಿರುವ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಕೂಡ ಹೋರಾಟ ನಡೆಸಬೇಕು. ಇಲ್ಲದಿದ್ದಲ್ಲಿ ಕೆಲವರ ಸ್ವಾರ್ಥಕ್ಕಾಗಿಯಿರುವ ಹೋರಾಟ ಸಮಿತಿ ವಿಸರ್ಜಿಸುವಂತೆ ಅವರು ಹೇಳಿದರು.
ಮೂಲ್ಕಿ ತಾಲೂಕು ಹೋರಾಟ ಸಮಿತಿ ಮೂಲ್ಕಿ ತಾಲೂಕು ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ಕೂಡ ಹೋರಾಟ ನಡೆಸುವುದು. ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕ ಬಗ್ಗೆ ಹೋರಾಟ ಮಾಡಿದ ಹೋರಾಟ ಸಮಿತಿಯ ಸದಸ್ಯರ ಗಮನಕ್ಕೆ ಕೂಡ ತರಲಿಲ್ಲ. ಹೋರಾಟ ಮಾಡುವಾಗ ಇತರ ಸಂಸ್ಥೆಗಳ ಬೆಂಬಲ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ತಿಳಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹರೀಶ್ ಪುತ್ರನ್ ಮೂಲ್ಕಿ ಹೋಬಳಿಯಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಹೋರಾಟ ಮಾಡುವುದು ತಪ್ಪಲ್ಲ,ರಾಜಕೀಯ ಮಾಡುವುದಾದರೇ ಸಮಿತಿಯ ಅಗತ್ಯವಿಲ್ಲ, ಮೂಲಭೂತ ಸೌಕರ್ಯಗಳ ಬಗ್ಗೆ ಹೋರಾಟ ಮಾಡಿದ ರಿಕ್ಷಾ ಚಾಲಕನಿಗೆ ಬೆಂಬಲಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಮೂಲ್ಕಿ ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಬಿಪಿನ್ ಪ್ರಸಾದ್, ಗೌರವಾಧ್ಯಕ್ಷ ಭಾಸ್ಕರ ಹೆಗ್ಡೆ, ಕಾರ್ಯದರ್ಶಿ ಅಶೋಕ್ ಚಿತ್ರಾಪು, ಸುನೀಲ್ ಆಳ್ವ, ಉದಯ ಅಮೀನ್ ಮಟ್ಟು, ಹರ್ಷರಾಜ್ ಶೆಟ್ಟಿ ಜಿ.ಎಂ. ಅಬ್ದುಲ್ ರಜಾಕ್, ರಾಜಾ ಪತ್ರಾವೋ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಭಾಗವಹಿಸಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

