'ಹಿಂದೂ ವಿರೋಧಿ ನೀತಿ ಜಾರಿಯಾದರೆ ದೇಶಾದ್ಯಂತ ಪ್ರತಿಭಟನೆ'
ಮಂಗಳೂರು: ಕರ್ನಾಟಕ ಸರ್ಕಾರ ಮಠ, ಮಂದಿರಗಳ ಸ್ವಾಧೀನ ಪಡಿಸುವ ಬಗ್ಗೆ ಸೇರಿದಂತೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುತ್ತಿರುವುದು ಹಿಂದೂ ವಿರೋಧಿ ನೀತಿಯಾಗಿದ್ದು, ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ತೀವ್ರತರ ಪ್ರತಿಭಟನೆ ನಡೆಸಲಿದೆ ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ಭಾಯಿ ತೊಗಾಡಿಯಾ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಮತಬ್ಯಾಂಕಿಗಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದು, ಈ ಮೂಲಕ ಹಿಂದೂ ಕಾರ್ಯಕರ್ತರನ್ನು ವಿವಿಧ ಕಾನೂನು ಕಾಯ್ದೆಯಡಿಯಲ್ಲಿ ಬಂಧಿಸುವಲ್ಲಿ ಕಾರ್ಯಾಚರಿಸುತ್ತಿದೆ. ಹಿಂದೂಗಳನ್ನು ಹಣಿಯಲು ಐಪಿಸಿ 153 ಸೆಕ್ಷನ್ನ್ನು ಬಳಸಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದರು.
ರಾಜ್ಯ ಸರ್ಕಾರ ನಡೆಸುತ್ತಿರುವ ನಾಟಕೀಯ ವರ್ತನೆಯ ಬಗ್ಗೆ ಕೇಂದ್ರ ಸರ್ಕಾರ ನಿಗಾ ವಹಿಸಿ ಸರಿಪಡಿಸಲಿ. ವಿನಾ ಕಾರಣ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ನಿಲ್ಲಿಸದಿದ್ದಲ್ಲಿ, ಮುಂದಿನ ಪರಿಣಾಮ ಸರ್ಕಾರ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಬೆನ್ನಿಹಿನ್ ಗುರಿ ಕೇವಲ ಮತಾಂತರ: ಅಂತಾರಾಷ್ಟ್ರೀಯ ಧರ್ಮಪ್ರಚಾರಕ ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸುತ್ತಿರುವ ಉದ್ದೇಶ ರೋಗ ಗುಣಪಡಿಸುವುದಲ್ಲ, ಮತಾಂತರಗೊಳಿಸುವುದಾಗಿದೆ. ಸ್ವಇಚ್ಛೆಯಿಲ್ಲದೆ ಯಾರನ್ನೂ ಮತಾಂತರಗೊಳಿಸಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಿಂದೂಗಳನ್ನು ಗುರಿಯಾಗಿಸಿ ಕಾರ್ಯಕ್ರಮ ನಡೆಯುತ್ತಿದ್ದು, ಆಕ್ಷೇಪಿಸುವುದಾಗಿ ಹೇಳಿದರು.
ಪಕ್ಷಬೇಧ ಮರೆತು ಬೆಂಬಲ: ಹಿಂದೂಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಯಾರಾದರೂ ಸರಿಯೇ ಅವರನ್ನು ಪಕ್ಷಬೇಧ ಮರೆತು ಬೆಂಬಲಿಸುತ್ತೇವೆ. ಮುಖ್ಯವಾಗಿ ಹಿಂದೂಗಳ ಅಭಿವೃದ್ಧಿ ಇವರ ಮುಖ್ಯ ಉದ್ದೇಶವಾಗಿರಬೇಕು ಎಂದರು.
ಕಾಂಗ್ರೆಸ್ಗೆ ಮುಸ್ಲಿಂರ ಭಯ: ದೇರಳಕಟ್ಟೆ ಕೃತ್ಯ ಖಂಡನೀಯ. ಕರ್ನಾಟಕ ಸರ್ಕಾರಕ್ಕೆ ಮುಸ್ಲಿಂರ ಭಯವಿದ್ದಂತೆ ಕಾಣುತ್ತದೆ. ಅದಕ್ಕಾಗಿ ಘಟನೆಯ ಆರೋಪಿಗಳಿಗೆ ಶಿಕ್ಷೆ ನೀಡಲು ಹಿಂದೇಟು ಹಾಕುತ್ತಿದೆ. ಇಂಥ ಕೃತ್ಯ ಮಾಡಿದವರನ್ನು ಜಾತಿ ಬೇಧ ಮರೆತು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

