ಮನೆಗೆ ಕನ್ನ; ನಗ ನಗದು ಕಳವು
ಕಾಪು; ಇಲ್ಲಿನ ಉಳಿಯಾರಗೋಳಿ ಗ್ರಾಮದ ಎ.ಸಿ. ನಿವಾಸ ಎಂಬ ಮನೆಯಿಂದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ನಗ- ನಗದನ್ನು ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಅಂಗರ ಸಿ. ಮೆಂಡನ್ ಎಂಬವರ ಈ ಮನೆಯಲ್ಲಿ ಅವರ ಅಕ್ಕ ಜಲಜ ಮೆಂಡನ್ ಎಂಬವರು ಒಬ್ಬರೇ ವಾಸವಾಗಿದ್ದು. ಅವರು ಎಂದಿನಂತೆ ರಾತ್ರಿ 8 ಗಂಟೆಗೆ ನೆರೆಮನೆಯವರ ಮನೆಗೆ ಮಲಗಲು ಹೋಗಿದ್ದು, ಶುಕ್ರವಾರ ಬೆಲಗ್ಗೆ 5 ಗಂಟೆಗೆ ವಾಪಸ್ ಮನೆಗೆ ಬಂದಾಗ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ಮಾಡಿನ ಹೆಂಚು ತೆಗೆದು ಒಳಗಿಳಿದ ಕಳ್ಳರು, ಮನೆಯಲ್ಲಿದ್ದ 30 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಮತ್ತು ಒಂದು ಚಿನ್ನದ ಚೈನು ಹಾಗೂ 35,000 ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಅಂಗರ ಸಿ. ಮೆಂಡನ್ ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

