ದಕ್ಷಿಣ ಕನ್ನಡ

ಕಲ್ಲಡ್ಕ ಭಟ್ ಭಾಷಣ ಪ್ರಕರಣ: ದೂರುದಾರ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಸೂಚನೆ

Published On :

ಮಂಗಳೂರು: ಗುರುಪುರ ವಜ್ರದೇಹಿ ಮಠದಲ್ಲಿ ನಡೆದ ಹಿಂದು ಸಮಾವೇಶದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಚಕ್ರವರ್ತಿ ಸೂಲಿಬೇಲೆ ಕಾನೂನು ಬಾಹಿರ ಭಾಷಣ ಮಾಡಿಲ್ಲ. ಹಿಂದೂ ಸಮಾಜಕ್ಕೆ ಆದ ಅನ್ಯಾಯ ಬಗ್ಗೆ ಮಾತನಾಡಿದ್ದಾರೆ. ಆದರೆ ಮಲ್ಲೂರಿನ ಮಹಮ್ಮದ್ ಉಸ್ಮಾನ್ ನಕಲಿ ಸಿಡಿ ತಯಾರಿಸಿ ಸುಳ್ಳು ಆರೋಪಗಳನ್ನು ಮಾಡಿ ಬಜಪೆ ಠಾಣೆಯಲ್ಲಿ ಹಿಂದೂ ನಾಯಕರ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ದೂರುದಾರನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.  ಗುರುಪುರ ವಜ್ರದೇಹಿ ಮಠದ ಸಹಾಯಕ ಮ್ಯಾನೆಜರ್ ಸುಧಾಕರ್ ಅವರ ದೂರು ಸ್ವೀಕರಿಸಿ ಮಲ್ಲೂರಿನ ಮಹಮ್ಮದ್ ಉಸ್ಮಾನ್ ಮೇಲೆ ದೂರು ದಾಖಲಾಗಿದೆ.  ಹಿಂದು ಸಂಗಮದಂದು ರಾತ್ರಿ 7 ಗಂಟೆಗೆ ಉಸ್ಮಾನ್ ವಜ್ರದೇಹಿ ಮಠದ ಬಳಿ ಹಾದುಹೋಗುತ್ತಿದ್ದ ಎನ್ನುವುದು ಸುಳ್ಳು. ಹಿಂದು-ಮುಸಲ್ಮಾನರ ನಡುವೆ ದ್ವೇಷ ಮಾಡುವ ದುರುದ್ದೇಶದಿಂದ ಸುಳ್ಳು ದೂರು ನೀಡಿದ್ದಾನೆ ಎಂದು ಸುಧಾಕರ್ ಬಜಪೆ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಕೀಲ ಪಿ.ಪಿ. ಹೆಗ್ಡೆ ಮೂಲಕ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದರು. ವಾದ ಆಲಿಸಿದ ಜೆಎಂಎಫ್‌ಸಿ ಕೋರ್ಟ್ ಉಸ್ಮಾನ್ ಮೇಲೆ ಐಪಿಸಿ ಸೆ.153ರಂತೆ ಎಫ್‌ಐಆರ್ ದಾಖಲಿಸುವಂತೆ ಬಜಪೆ ಠಾಣಾಧಿಕಾರಿಗೆ ಆದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.