ಸಿಂಡಿಕೇಟ್ ಬ್ಯಾಂಕ್ ರು. 200 ಕೋಟಿ ಮೌಲ್ಯದ ಶೇರು ಸರ್ಕಾರಕ್ಕೆ ನೀಡಲು ಮಹಾಸಭೆ ನಿರ್ಧಾರ
ಮಣಿಪಾಲ: ಸಿಂಡಿಕೇಟ್ ಬ್ಯಾಂಕ್ನ ರು. 200 ಕೋಟಿ ಮೌಲ್ಯದ ಶೇರುಗಳನ್ನು ಸರ್ಕಾರಕ್ಕೆ ನೀಡುವುದಕ್ಕೆ ಬ್ಯಾಂಕ್ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಶುಕ್ರವಾರ ಬ್ಯಾಂಕಿನ ವಿಶೇಷ ಮಹಾಸಭೆ ಕರೆಯಲಾಗಿದ್ದು, ಬ್ಯಾಂಕ್ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಕುಮಾರ್ ಜೈನ್ ಈ ಪ್ರಸ್ತಾವವನ್ನು ಶೇರುದಾರರ ಮುಂದೆ ಮಂಡಿಸಿದರು.
ಸಭೆಯ ನಂತರ ಸಿಂಡಿಕೇಟ್ ಬ್ಯಾಂಕ್ ದೇಶದ 8 ಪ್ರಮುಖ ನಗರಗಳಲ್ಲಿ 8 ಕ್ಷೇತ್ರೀಯ ಮಹಾಪ್ರಬಂಧಕ ಕಚೇರಿಗಳನ್ನು ತರೆಯುತ್ತಿದ್ದು, ಮೊದಲ ಕಚೇರಿಯನ್ನು ಜೈನ್ ಅವರು ಮಣಿಪಾಲದಲ್ಲಿ ಉದ್ಘಾಟಿಸಿದರು.
ಶೇ.25 ಮಧ್ಯಂತರ ಲಾಭಾಂಶ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ವರ್ಷದ ತೃತೀಯ ಕಾಲುವಾರ್ಷಿಕ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಶೇರುದಾರರಿಗೆ ಶೇ. 25ರಷ್ಟು ಮಧ್ಯಂತರ ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು. ಪ್ರಸ್ತುತ ವರ್ಷದಲ್ಲಿ ಈಗಾಗಲೇ ಬ್ಯಾಂಕಿನ 145 ಹೊಸ ಶಾಖೆ ತೆರೆಯಲಾಗಿದ್ದು, ವರ್ಷಾಂತ್ಯದೊಳಗೆ ಇನ್ನೂ 100 ಶಾಖೆಗಳನ್ನು ತೆರೆಯಲಾಗುವುದು. 2014-15ರಲ್ಲಿ 200 ಶಾಖೆಗಳನ್ನು ತೆರೆಯುವ ಗುರಿ ಹಾಕಿಕೊಳ್ಳಲಾಗಿದೆ, ಈಗಾಗಲೇ ಲಂಡನ್ನಲ್ಲಿ ಸಾಗರೋತ್ತರ ಶಾಖೆ ಇದ್ದು, ಮುಂದೆ ಯುಎಇ, ಹಾಂಗ್ ಕಾಂಗ್, ಚೀನಾ, ದಕ್ಷಿಣ ಆಫ್ರಿಕಾಗಳಲ್ಲಿಯೂ ವಿದೇಶಿ ಶಾಖೆಗಳನ್ನು ತೆರೆಯಲಾಗುತ್ತದೆ. ಜೊತೆಗೆ 2500 ಮಂದಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಬ್ಯಾಂಕಿನ ಅನುತ್ಪಾದಕ ಆಸ್ತಿ ಶೇ. 2.88 ಇದ್ದು, ಇದು ಬ್ಯಾಂಕಿಂಗ್ ಕ್ಷೇತ್ರದ ಶೇ. 4.5ಕ್ಕಿಂತ ಬಹಳ ಕಡಿಮೆ ಇದೆ ಎಂದು ಜೈನ್ ಸಂತಸ ವ್ಯಕ್ತಪಡಿಸಿದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್, ಟಿ.ಕೆ. ಶ್ರೀವಾಸ್ತವ, ಕ್ಷೇತ್ರೀಯ ಮಹಾಪ್ರಬಂಧಕ ಪಿ. ಪಳನಿಸಾಮಿ, ಬ್ಯಾಂಕಿನ ನಿರ್ದೇಶಕರು, ಪ್ರಧಾನ ಹಾಗೂ ನಿಗಮ ಕಚೇರಿಯ ಮಹಾಪ್ರಬಂಧಕ, ಇತರ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

