15ರಿಂದ ಕೈಮಗ್ಗ ಸಂಘಟನೆಗಳ 200 ಕಿ.ಮೀ. ಪಾದಯಾತ್ರೆ
ಮಂಗಳೂರು: ಕೈಮಗ್ಗ ಉದ್ದಿಮೆಯನ್ನು ವಿನಾಶದಂಚಿಗೆ ತಳ್ಳಿರುವ ಕೈಮಗ್ಗ ಯಾಂತ್ರೀಕರಣ ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಬಡ ಖಾದಿ ನೇಕಾರರ ನೆರವಿಗೆ ಸರ್ಕಾರಕ್ಕೆ ಒತ್ತು ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಜ. 15 ರಿಂದ 27ರವರೆಗೆ ಗಜೇಂದ್ರಗಡದಿಂದ ಬಾದಮಿಯವರೆಗೆ ಪಾದಯಾತ್ರೆ ನಡೆಸಲಿದೆ ಎಂದು ಮೇಲುಕೋಟೆ ಜನಪದ-ಸೇವಾ ಟ್ರಸ್ಟ್ನ ಸಂತೋಷ್ ಕೌಲಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದಕ್ಕಾಗಿ ಜ. 15 ರಿಂದ 27ರವರೆಗೆ ಗದಗ ಜಿಲ್ಲೆಯ ಗಜೇಂದ್ರಗಡದಿಂದ ಪ್ರಾರಂಭಿಸಿ ಬಾಗಲಕೋಟೆ ಜಿಲ್ಲೆಯ ಬಾದಮಿಯವರೆಗೆ 200 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಜ. 30 ರಂದು ಶಿವಮೊಗ್ಗ, ಸಾಗರದ ಶ್ರಮಜೀವಿ ಆಶ್ರಯದಲ್ಲಿ ದೇಸಿ ಹಾಗೂ ಚರಕ ಸಂಸ್ಥೆಗಳ ಕಾರ್ಯಕರ್ತರಾದ ಪ್ರಸನ್ನ ಅವರು ಅನಿರ್ಧಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸುವರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

