ದಕ್ಷಿಣ ಕನ್ನಡ

ನೇಕಾರರ ಬವಣೆ ತೆರೆದಿಟ್ಟ 'ಎಳೆ'

Published On :

ಕಾಂತಾವರ: ನೇಕಾರರ ಬದುಕಿನ ಬವಣೆಗಳನ್ನು ಮತ್ತು ಹಿಂದಿನ ಕಾಲಘಟ್ಟದಲ್ಲಿ ಮನೆ ಮಾಡಿದ್ದ ಅಸಂಖ್ಯಾತ ಮೂಢನಂಬಿಕೆಗಳಿಂದಾಗುವ ಅನಾಹುತಗಳನ್ನು ಡಾ.ಅನುಪಮಾ ನಿರಂಜನ ತಮ್ಮ 'ಎಳೆ' ಕಾದಂಬರಿಯಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ ಎಂದು ಲೇಖಕಿ ಪರಮೇಶ್ವರಿ ಲೋಕೇಶ್ವರ್ ಹೇಳಿದ್ದಾರೆ.
ಕಾಂತಾವರ ಕನ್ನಡ ಸಂಘದಲ್ಲಿ 'ತಿಂಗಳ ನುಡಿನಮನ' ಕಾರ್ಯಕ್ರಮದಲ್ಲಿ ಈ ವರ್ಷಪೂರ್ತಿ ಮಹಿಳಾ ಸಾಹಿತಿಗಳಿಂದಲೇ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದ್ದು, ಮೊದಲನೆಯದಾಗಿ ಪರಮೇಶ್ವರಿ ಲೋಕೇಶ್ವರ್ ಅವರು 'ಎಳೆ' ಕಾದಂಬರಿ ಕುರಿತು ಮಾತನಾಡಿದರು.
ಹಳ್ಳಿಯ ಸಾಮಾನ್ಯ ಜನರ ಬದುಕನ್ನು ಹತ್ತಿರದಿಂದ ಕಂಡ ಅನುಪಮಾ, ಜನರ ಭಕ್ತಿ, ಮೂಢನಂಬಿಕೆಗಳಿಂದಾಗಿ ಸ್ವತಃ ಅವರು ಅನುಭವಿಸುವ ತೊಂದರೆಗಳು ಜೊತೆಗೆ ಶ್ರೀಮಂತರು ಮತ್ತು ರಾಜಕೀಯ ವ್ಯಕ್ತಿಗಳು ಜನತೆಯನ್ನು ಹೀನಾಯವಾಗಿ ನಡೆಸಿಕೊಳ್ಳುವ ರೀತಿ ಮತ್ತು ಸಾಮಾಜಿಕವಾಗಿ ಮನುಷ್ಯನಲ್ಲಿರುವ ದೌರ್ಬಲ್ಯ, ಕುಂದುಕೊರತೆಗಳನ್ನು ಎಳೆಎಳೆಯಾಗಿ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಸ್ವತಃ ವೈದ್ಯೆಯಾಗಿದ್ದ ಅನುಪಮಾ ಆದರ್ಶ ಪಾತ್ರಗಳ ಮೂಲಕ ಸಂಪ್ರದಾಯ, ಮೂಢನಂಬಿಕೆಗಳನ್ನು ವಿರೋಧಿಸುತ್ತ ಬದಲಾವಣೆಗೆ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಹೊಂದಿಕೊಳ್ಳುವ ಜಾಗೃತಿ ಮೂಡಿಸುವ ಕಾರ್ಯವನ್ನು ಕಾದಂಬರಿಯಲ್ಲಿ ಮಾಡಿದ್ದಾರೆ ಎಂದರು.
ಪರಮೇಶ್ವರಿ ಅವರಿಗೆ ಇದೇ ಸಂದರ್ಭ ಸ್ಮರಣಿಕೆ ನೀಡಿ ಗೌರವಿಸಲಾಯಿತು.
 ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.  'ನುಡಿನಮನ'ದ ನಿರಂತರ ಪ್ರಾಯೋಜಕ ಸಿ.ಕೆ. ಪಡಿವಾಳ್ ಇದ್ದರು. ಬಾಬು ಶೆಟ್ಟಿ ನಾರಾವಿ ನಿರೂಪಿಸಿದರು. ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.