ಅಡಕೆ ನಿಷೇಧ ವರದಿ ಒಪ್ಪಿದ ಕೇಂದ್ರ; ಕಾಂಗ್ರೆಸ್ ನಾಯಕರು ಏನನ್ನುತ್ತಾರೆ?- ಬಿಜೆಪಿ
ಮಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ವರದಿಯನ್ನು ಸುಪ್ರೀಂ ಕೋರ್ಟ್ಗೆ ನೀಡಿರುವುದನ್ನು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಒಪ್ಪಿಕೊಂಡಿದ್ದಾರೆ. ತಂಬಾಕು ಉತ್ಪನ್ನ ಜತೆ ಅಡಕೆ ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ತರಬಲ್ಲದು ಎಂದು ವರದಿಯಲ್ಲಿದೆ. ಅಡಕೆ ನಿಷೇಧಕ್ಕೆ ಕೇಂದ್ರ ಮುಂದಾಗಿದ್ದು ಸತ್ಯ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಕೇಂದ್ರವೇ ಅಡಕೆ ನಿಷೇಧಕ್ಕೆ ಅಫಿದವಿತ್ ಸಲ್ಲಿಸಿರುವುದು ಬಹಿರಂಗಗೊಂಡಂತಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಜಿಲ್ಲಾ ಬಿಜೆಪಿ ಸವಾಲು ಹಾಕಿದೆ.
ಮುಂಬೈನ ಟಾಟಾ ಇನ್ಸಿಟ್ಯೂಟ್ ಆಫ್ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸಿದ್ಧಪಡಿಸಿದ ವರದಿಯನ್ನು ನೀಡಿರುವುದಾಗಿ ಕಾರವಾರಕ್ಕೆ ಭೇಟಿ ನೀಡಿದ ಸಂದರ್ಭ ಇಂದಿರಾ ಜೈಸಿಂಗ್ ಹೇಳಿರುವುದು ಕಾಂಗ್ರೆಸ್ ನಾಯಕರ ರೈತ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಜಿಲ್ಲಾ ವಕ್ತಾರ ಸತೀಶ ಪ್ರಭು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯಾದ್ಯಂತ ರೈತರ ಪರವಾಗಿ ಅಡಕೆ ನಿಷೇಧ ಪ್ರಸ್ತಾಪ ವಿರೋಧಿಸಿ ಆಂದೋಲನ ಮಾಡುತ್ತಿದೆ. ಆದರೆ ರಾಜ್ಯ ಹಾಗೂ ಕೇಂದ್ರ ಕಾಂಗ್ರೆಸ್ ನಾಯಕರು ಬಿಜೆಪಿ ಸುಳ್ಳು ಹೇಳಿ ರೈತರನ್ನು ವಂಚಿಸುತ್ತಿದೆ. ಅಡಕೆ ನಿಷೇಧದ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಬೂಬು ನೀಡಿದ್ದರು. ಈಗ ಇಂದಿರಾ ಜೈಸಿಂಗ್ ಹೇಳಿಕೆ ನೀಡಿರುವುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಸಿಗರೇಟ್ ಲಾಬಿಗೆ ಮಣಿದು ಅಡಕೆ ನಿಷೇಧಕ್ಕೆ ಕೇಂದ್ರ ಮುಂದಾಗಿದ್ದು, ಸುಪ್ರೀಂನಲ್ಲಿ ನಕಾರಾತ್ಮಕ ವರದಿಯನ್ನು ಹಿಂದಕ್ಕೆ ಪಡೆಯುವವರೆಗೆ ಆಂದೋಲನದಿಂದ ಹಿಂದೆ ಸರಿಯುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

