ಹೆದ್ದಾರಿ ಕಾಮಗಾರಿಗೆ ಚುರುಕು ಮುಟ್ಟಿಸಲು ಸೂತ್ರ
ಸುಳ್ಯ: ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಭಾನುವಾರ ಸುಳ್ಯಕ್ಕೆ ಭೇಟಿ ನೀಡಿ ಸಂಪಾಜೆ-ಮಾಣಿ ಹೆದ್ದಾರಿ ಕಾಮಗಾರಿ ಬಗ್ಗೆ ಕೆ.ಆರ್.ಡಿ.ಸಿ.ಎಲ್., ಕೆ.ಎಂ.ಸಿ. ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಸುಳ್ಯದಿಂದ ಸಂಪಾಜೆ ವರೆಗೆ ಹೋಗಿ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭ, ಕಾಮಗಾರಿಗ ವೇಗ ನೀಡಲು ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೆ, ಪ್ರತಿ ವಾರ ಕಾಮಗಾರಿ ಪ್ರಗತಿ ತಿಳಿಸಲು ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗೃತ ಸಮಿತಿ ರಚಿಸಲು ತಹಸೀಲ್ದಾರ್ಗೆ ಆದೇಶಿಸಿದರು.
ಕಾಮಗಾರಿಯ ಗುಣಮಟ್ಟ ಮೇಲ್ವಿಚಾರಣೆಗೆ ಸಾರ್ವಜನಿಕರ ಕಡೆಯಿಂದ ಖಾಸಗಿ ಎಂಜಿನಿಯರ್ ಒಬ್ಬರನ್ನು ನೇಮಿಸುವುದಾಗಿಯೂ ಭರವಸೆ ನೀಡಿದರು.
ಕಾಮಗಾರಿ ಅವ್ಯವಸ್ಥೆ: ಕೆ.ಎಂ.ಸಿ.ಯವರು ನಿರ್ವಹಿಸುತ್ತಿ ರುವ ಈ ಕಾಮಗಾರಿಯ ನಗರ ವ್ಯಾಪ್ತಿಯಲ್ಲಿ ಆಗಿರುವ ಅವ್ಯವಸ್ಥೆ ಕುರಿತು ಪ್ರಕಾಶ್ ಹೆಗ್ಡೆ ಮತ್ತು ಗೋಕುಲದಾಸ್ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಜಾಲ್ಸೂರು ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ವೇಳೆ ಕುಡಿಯುವ ನೀರಿನ ನಳ್ಳಿಗಳು ತುಂಡಾಗಿದ್ದು, ಅವುಗಳನ್ನು ಪುನಃ ಕೆ.ಎಂ.ಸಿ.ಯವರು ಹಾಕಿ ಕೊಡುತ್ತಿಲ್ಲ ಎಂದು ಗ್ರಾ.ಪಂ.ಅಧ್ಯಕ್ಷ ಭಾಸ್ಕರ ಎಂ. ಹೇಳಿದರು.
ಹೊಳೆಗೆ ಮಣ್ಣು: ಸಂಪಾಜೆಯಲ್ಲಿ ಕಾಮಗಾರಿ ನಡೆಸುವಾಗ ಹೊಳೆಗೆ ಮಣ್ಣು ಸುರಿಯುತ್ತಿದ್ದಾರೆ. ರಸ್ತೆ ಅಗೆದು ಹಾಕಿ ಕೆಲಸ ಸರಿಯಾಗಿ ಮಾಡದೆ ಇರುವುದರಿಂದ ಧೂಳಿನ ಸ್ನಾನವಾಗುತ್ತಿದೆ. ಅವರ ಯಂತ್ರಗಳು ವಾರಕ್ಕೆ 2 ದಿನ ಕೆಲಸ ಮಾಡಿ, 4 ದಿನ ಮೊಸಳೆಯಂತೆ ಬಿದ್ದುಕೊಳ್ಳುತ್ತಿದೆ ಎಂದು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಹೇಳಿದರು.
ಜಿಲ್ಲಾಧಿಕಾರಿ ಇವುಗಳ ಬಗ್ಗೆ ಕೆ.ಆರ್.ಡಿ.ಸಿ.ಎಲ್. ಮತ್ತು ಕೆ.ಎಂ.ಸಿ ಅಧಿಕಾರಿಗಳನ್ನು ಪ್ರಶ್ನಿಸಿದರು.ನಗರದ ಫುಟ್ಪಾತ್ ಮತ್ತಿತರ ವ್ಯವಸ್ಥೆಗಳನ್ನು ಸರಿಪಡಿಸಿ ಕೊಡುವುದಾಗಿಯೂ, ಜಾಲ್ಸೂರು, ಸಂಪಾಜೆಗಳಲ್ಲಿರುವ ಸಮಸ್ಯೆ ನಿವಾರಿಸುವುದಾಗಿಯೂ ಕೆ.ಎಂ.ಸಿ.ಯ ರವಿಕುಮಾರ್ ಮತ್ತು ಕೆ.ಆರ್.ಡಿ.ಸಿ.ಎಲ್. ಸಲಹೆಗಾರ ಬೀರೇಶ್ವರ ಬಾಬು ಹೇಳಿದರು. ಸಂಪಾಜೆಯಲ್ಲಿ ಸೋಮಶೇಖರ ಕೈಂಗಾಜೆ, ಜಿ.ಕೆ. ಹಮೀದ್, ಮಹಮ್ಮದ್ ಕುಂಞ ಗೂನಡ್ಕ, ಕೆ.ಆರ್. ಜಗದೀಶ ರೈ ಮತ್ತಿತರರು ಜಿಲ್ಲಾಧಿಕಾರಿಯನ್ನು ಕಂಡು ಕಾಮಗಾರಿಯ ನಿಧಾನಗತಿಯ ಕುರಿತು ಮತ್ತು ಗುಣಮಟ್ಟ ಕುಂಠಿತವಾಗಿರುವ ಕುರಿತು ಜಿಲ್ಲಾಧಿಕಾರಿಗೆ ದೂರಿದರು.
ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಬ್ಬರು ಸಾರ್ವಜನಿಕ ಪ್ರಮುಖರಿರುವ ಜಾಗೃತ ಸಮಿತಿ ರಚಿಸಿ ಪ್ರತಿವಾರವೂ ಅವರೊಡನೆ ಸಭೆ ನಡೆಸಿ ಪ್ರತಿ ವಾರದ ಪ್ರಗತಿಯನ್ನು ತನಗೆ ತಿಳಿಸಬೇಕು ಎಂದು ತಹಸೀಲ್ದಾರ್ ಡಾ. ಔದ್ರಾಮಗೆ ಆದೇಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

