ದಕ್ಷಿಣ ಕನ್ನಡ

ಭಜನಾ ಮಂದಿರಕ್ಕೆ ಬಿಡುಗಡೆಯಾದ ಅನುದಾನ ಪಡೆದು ವಂಚನೆ: ದೂರು

Published On :

ವಿಟ್ಲ: ಭಜನಾ ಮಂದಿರದ ಸೊತ್ತುಗಳಿಗಾಗಿ ಸರ್ಕಾರದಿಂದ ಬಿಡುಗಡೆಗೊಂಡ ಹಣವನ್ನು ತಾಲೂಕು ಪಂಚಾಯಿತಿ ಮಾಜಿ ಸದಸ್ಯರೊಬ್ಬರು ತನ್ನ ಖಾತೆಗೆ ಜಮೆ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಕೇಪು ಗ್ರಾಮದ ಅಡ್ಯನಡ್ಕ ಶ್ರೀ ದುರ್ಗಾಪರಮೇಶ್ವರಿ ಮತ್ತು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಿಟ್ರಿಫೈಡ್ ನೆಲಹಾಸು ಹಾಗೂ ಮುಖ್ಯ ಬಾಗಿಲಿನ ಕದ ನಿರ್ಮಾಣಕ್ಕೆ ಸರ್ಕಾರದ ಆರಾಧನಾ ಯೋಜನೆ ಮೂಲಕ ರು. ಒಂದು ಲಕ್ಷ ಮಂಜೂರಾಗಿ, ಬಿಡುಗಡೆಗೊಂಡಿತ್ತು.  ತಾ.ಪಂ. ಮಾಜಿ ಸದಸ್ಯ ಅಡ್ಯನಡ್ಕ ನಿವಾಸಿ ಹರಿಪ್ರಸಾದ್ ಯಾದವ್ ಎಂಬವರು ತಾನು ಈ ಭಜನಾ ಮಂದಿರದ ಅಧ್ಯಕ್ಷ ಎಂದು ಪರಿಚಯಿಸಿಕೊಂಡಿದ್ದು, ಪದಾಧಿಕಾರಿಗಳ ಗಮನಕ್ಕೂ ತಾರದೆ ನಕಲಿ ಮೊಹರು ಬಳಸಿ, ಸಹಿ ಮಾಡಿ ರು. 1 ಲಕ್ಷ ಗಳನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎಂದು ಅಡ್ಯನಡ್ಕ ಪೂಜಾ ಬೇಕರಿ ಮಾಲೀಕ ಕೆ.ಪಿ. ರಾಘವೇಂದ್ರ ರಾವ್ ಪೊಲೀಸರಿಗೆ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ದಾಖಲೆಯಲ್ಲಿ ಕಂಡುಬಂದಂತೆ ಬಂಟ್ವಾಳ ತಹಸೀಲ್ದಾರ್‌ರಿಂದ 2013ನೇ ಸಾಲಿನ ಫೆ.8ರಂದು ಈ ಮೊತ್ತವನ್ನು ಚೆಕ್ ನಂಬ್ರ 633792ರ ಮೂಲಕ ಹರಿಪ್ರಸಾದ್ ಪಡೆದುಕೊಂಡಿದ್ದಾರೆ. ಫೆ.18ಕ್ಕೆ ಈ ಮೊತ್ತ ಅವರ ಖಾತೆಗೆ ಜಮಾ ಆಗಿದೆ ಎಂದು ದಾಖಲೆಗಳು ತಿಳಿಸುತ್ತವೆ. ಇದನ್ನು ಭಜನಾ ಮಂದಿರದ ಖಾತೆಗೆ ಈತನಕ ವರ್ಗಾಯಿಸಲಿಲ್ಲ. ಈ ಬೆಳಕಿಗೆ ಬಂದ ಬಳಿಕ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 420ಯಂತೆ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಗ್ಗೆ ತಹಸೀಲ್ದಾರ್ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿ, ಈ ರೀತಿಯ ಘಟನೆ ನಡೆದದ್ದು ಖಚಿತ. ಇದೀಗ ಅವರು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಆ ಮೊತ್ತವನ್ನು ಭಜನಾ ಮಂದಿರಕ್ಕೆ ಒಪ್ಪಿಸುತ್ತೇನೆ ಎಂದು ಚೆಕ್ ನೀಡಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.