ವಿವಿಧ ಕಳವು ಪ್ರಕರಣ ಆರೋಪಿಗಳ ಸೆರೆ; ಸೊತ್ತು ವಶಕ್ಕೆ
ಬೆಳ್ತಂಗಡಿ: ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ವಿವಿಧೆಡೆ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು ಇವರಿಂದ ಸುಮಾರು ರು. 10 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಪಡಂಗಡಿ ನಿವಾಸಿ ಹಮೀದ್ (38), ಕುವೆಟ್ಟು ಗ್ರಾಮದ ಮಹಮ್ಮದ್ ಇಸಾಕ್ (28) ಬಂಧಿತರು. ಇವರಿಂದ ಕಳವು ಮಾಡಿದ ಅಡಕೆ, ಕೃತ್ಯಕ್ಕೆ ಬಳಸಿದ ವ್ಯಾನ್, ಕಾರು ವಶ ಪಡಿಸಿಕೊಳ್ಳಲಾಗಿದೆ. ಇವರು ಮದ್ದಡ್ಕ ಹಾಗೂ ತೋಟತ್ತಾಡಿ ಹಾಲು ಉತ್ಪಾದಕರ ಸಂಘದಿಂದ ನಗದು ಕಳವು, ಬೆಳ್ತಂಗಡಿ ಫಾರೂಕ್, ಗೇರುಕಟ್ಟೆ ಅಬ್ದುಲ್ ಕರೀಂ, ವೇಣೂರಿನ ಸುರೇಶ್ ಮೂಲ್ಯ, ಪುತ್ತೂರು ತಾಲೂಕು ನೆಲ್ಯಾಡಿಯ ಅರವಿಂದ ಟ್ರೇಡರ್ಸ್, ಅಲಂಕಾರಿನ ಎವನ್ ಟ್ರೇಡರ್ಸ್, ಬಂಟ್ವಾಳ ತಾಲೂಕಿನ ಕಕ್ಯೆಪದವು ಇಸಾಕ್ ಅಂಗಡಿಗಳಿಂದ ಅಡಕೆ ಕದ್ದಿದ್ದಾಗಿ ಹೇಳಲಾಗಿದೆ. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪೆಟ್ರೋಲ್ ಬಂಕ್ನಿಂದ ನಗದು ಕದ್ದಿದ್ದರು. ಆರೋಪಿಗಳನ್ನು ಇತ್ತೀಚೆಗೆ, ಗುರುವಾಯನಕೆರೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಹಿನ್ನಲೆಯಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಬಹಿರಂಗಗೊಂಡಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ, ಎಸ್ಐ ಪ್ರಕಾಶ್ ದೇವಾಡಿಗ, ವೇಣೂರು ಅಬ್ದುಲ್ ಖಾದರ್ ತಂಡ ಪ್ರಕರಣ ಭೇದಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

