ಮಿಯಾರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕ್ರಮಕ್ಕೆ ಶಾಸಕ ಸೂಚನೆ
ಕಾರ್ಕಳ: ಮಿಯಾರು ಗ್ರಾ.ಪಂ. ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಶಾಸಕ ವಿ. ಸುನಿಲ್ ಕುಮಾರ್ ಸೂಚಿಸಿದ್ದಾರೆ.
ಇಲ್ಲಿನ ಶ್ರೀಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾರ್ಕಳ ಹೋಬಳಿಯ ಕಸಬಾ, ದುರ್ಗಾ, ಮಿಯ್ಯಾರು, ರೆಂಜಾಳ, ಕಾಂತಾವರ ಮತ್ತು ಸಾಣೂರು ಗ್ರಾ.ಪಂ. ವ್ಯಾಪ್ತಿಯ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಿಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದನ್ನು ಸ್ಥಳೀಯ ಸದಸ್ಯರು ತನ್ನ ಗಮನಕ್ಕೆ ತಂದಿದ್ದಾರೆ. ಅವೆಲ್ಲವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಈ ಸಭೆಯಲ್ಲಿ ಅಲ್ಲಿನ ಪಿಡಿಒ ಗೈರು ಹಾಜರಾಗಿದ್ದಾರೆ. ಅಂತಹ ಬೇಜಾವಬ್ದಾರಿ ಪಿಡಿಒ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಶಾಸಕರು ಹೇಳಿದರು.
ಬೋರ್ಕಟ್ಟೆ- ರೆಂಜಾಳ- ಸಾಣೂರು ರಸ್ತೆ ಅಭಿವೃದ್ಧಿಗೆ ಈಗಾಗಲೇ ರು. 3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕಾಂತಾವರ- ಮಂಜರಪಲ್ಕೆ ಸಂಪರ್ಕ ರಸ್ತೆ ಡಾಂಬರಿಕರಣಕ್ಕೆ ರು. 80 ಲಕ್ಷ, ಮಿಯಾರು- ನಲ್ಲೂರು ಮತ್ತು ಬೋರ್ಕಟ್ಟೆ ರಸ್ತೆ ಅಭಿವೃದ್ಧಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರು. 3.50 ಕೋಟಿ, ಸಾಣೂರು- ಕುಂಟಲ್ಪಾಡಿ ಸಂಪರ್ಕ ರಸ್ತೆಗೆ ರು. 3 ಕೋಟಿ, ಮಿಯಾರು ಅಡ್ಕರಪಲ್ಕೆ ಕಾಲೋನಿ ಕೃಷಿ ಭೂಮಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ರು. 10 ಲಕ್ಷ, ಕಂಬಳ ಕ್ರೀಡಾಂಗಣದ ಕೆರೆ ಅಭಿವೃದ್ಧಿಗೆ ರು. 25 ಲಕ್ಷ ಬಿಡುಗಡೆಗೊಂಡಿದೆ. ದುರ್ಗ ಸಂಪರ್ಕ ರಸ್ತೆಗೆ ಜಿ.ಪಂ. ವತಿಯಿಂದ ಪ್ಯಾಚ್ ವರ್ಕ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಕಾರ್ಕಳ ಮಹಾಮಸ್ತಾಭಿಷೇಕಕ್ಕೆ ರು. 100 ಕೋಟಿ ವಿಶೇಷ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ಮೀಸಲಿಡುವಂತೆ ಮುಖ್ಯಮಂತ್ರಿ ಬಳಿ ಒತ್ತಾಯಿಸಲಾಗುವುದು ಎಂದರು.
ತಾಲೂಕಿನಲ್ಲಿ ಶೇ.52ರಷ್ಟು ಬಿಪಿಎಲ್ ಪಡಿತರ ಪಟ್ಟಿಯಿತ್ತು. ಇದೀಗ ಅದನ್ನು 70ರಷ್ಟು ಫಲಾನುಭವಿಗಳಿಗೆ ನೀಡಬೇಕಾಗಿದೆ. ಈಗಾಗಲೇ ಬಾಕಿ ಉಳಿದಿರುವ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡುವಂತೆ ಆಹಾರ ನಿರೀಕ್ಷಕರಿಗೆ ಸುನಿಲ್ ಕುಮಾರ್ ಸೂಚನೆ ನೀಡಿದರು.
ಜಿ.ಪಂ. ಸದಸ್ಯ ಉದಯ ಎಸ್. ಕೋಟ್ಯಾನ್ ಮಾತನಾಡಿದರು. ಮೋಹನ್ದಾಸ್ ಅಡ್ಯಂತಾಯ, ಶೇಖರ್ ಅಂಚನ್, ಕೃಷ್ಣ ದುರ್ಗ, ಮಾಧವ ಕಾಮತ್, ಗಿರೀಶ್ ಅಮೀನ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ತಾ.ಪಂ. ಉಪಾಧ್ಯಕ್ಷ ಜಯವರ್ಮ ಹೆಗ್ಡೆ, ಸದಸ್ಯರಾದ ವಿಜಯ ಕುಮಾರಿ, ಸುನಿತ ಶೆಟ್ಟಿ, ನಾಗಪ್ಪ ಮೇರ, ಸಾಣೂರು ಗ್ರಾ.ಪಂ. ಅಧ್ಯಕ್ಷ ಕರುಣಾಕರ ಕೋಟ್ಯಾನ್, ದುರ್ಗ ಗ್ರಾ.ಪಂ. ಅಧ್ಯಕ್ಷ ತನ್ವೀರ್, ಮಿಯಾರು, ರೆಂಜಾಳ ಗ್ರಾ.ಪಂ ಅಧ್ಯಕ್ಷರು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚೆನ್ನಪ್ಪ ಮೊಯ್ಲಿ, ಗ್ರೇಡ್-2 ತಹಸೀಲ್ದಾರ್ ಮಾಣಿಕ್ಯ ಎನ್., ಪುರಸಭೆ ಮುಖ್ಯಾಧಿಕಾರಿ ಮೇಬಲ್ ಡಿಸೋಜ ಇದ್ದರು. ಕೃಷ್ಣ ಶೆಟ್ಟಿಗಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

