ಉಜಿರೆ: ಅಂತಾರಾಷ್ಟ್ರೀಯ ಯೋಗ ಶಿಬಿರದಲ್ಲಿ ವಿದೇಶಿ ಯೋಗ ಶಿಕ್ಷಕರು
ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ ಇಲ್ಲಿಗೆ ದಕ್ಷಿಣ ಕೊರಿಯದ ಮೊಂಕ್ವಾಂಗ್ ಡಿಜಿಟಲ್ ಯುನಿವರ್ಸಿಟಿಯ 30 ಮಂದಿ ಯೋಗ ಶಿಕ್ಷಕರು ಆಗಮಿಸಿದ್ದಾರೆ.
ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆರಂಭಗೊಂಡ 5 ದಿನಗಳ 'ಯೋಗ ತರಬೇತುದಾರರಿಗೆ ತರಬೇತಿ' ಎಂಬ ಅಂತಾರಾಷ್ಟ್ರೀಯ ಶಿಬಿರದಲ್ಲಿ ಅವರು ಪಾಲ್ಗೊಂಡು ಮಾಹಿತಿ ಪಡೆಯಲಿದ್ದಾರೆ.
ಶಿಬಿರ ಉದ್ಘಾಟಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪಂಚಭೂತಗಳನ್ನು ಆರಾಧಿಸುವ ಕ್ರಮ ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿದ್ದರು. ಇದನ್ನು ಪ್ರಕೃತಿ ಪೂಜೆ ಎಂದೂ ಹೇಳುತ್ತೇವೆ. ಇದನ್ನು ಮತ್ತೆ ನಾವು ಅನುಸರಿಸಬೇಕಾಗಿದೆ. ಹೀಗಾಗಿ ಆಧುನಿಕ ಜೀವನ ಶೈಲಿಯೊಳಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಚಿಂತನೆ ಅಗತ್ಯ ಎಂದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಪೂರ್ವಜರು ಸಂಶೋಧಿಸಿದ್ದಾರೆ. ಶಿಸ್ತಿನ ಜೀವನ. ಕಠಿಣ ಪರಿಶ್ರಮದಿಂದ ಒಂದು ದೇಶ ಯಶಸ್ಸು ಕಾಣಲು ಸಾಧ್ಯ. ಇದಕ್ಕೆ ಜಪಾನ್, ಕೊರಿಯಾ, ಚೀನ, ಥೈವಾನ್ ಮೊದಲಾದ ದೇಶಗಳನ್ನು ಉದಹರಿಸಬಹುದಾಗಿದೆ ಎಂದರು.
ಬೆಂಗಳೂರಿನ ಎಸ್‌ಯುವೈಎಎಸ್‌ಎನ ಐಸಿಎಂಆರ್ ಸಂಶೋಧನಾ ಕೇಂದ್ರದ ಸಹ ನಿರ್ದೇಶಕ ಡಾ.ನವೀನ್ ಕೆ.ವಿ. ಮಾತನಾಡಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಚಿಕಿತ್ಸೆಗಳ ಮುಖ್ಯವಾಹಿನಿಗೆ ತರಬೇಕಾಗಿದೆ. ವಿದೇಶಿಗರು ಭಾರತಕ್ಕೆ ಬಂದು ಯೋಗದ ಮೂಲ ಬೇರನ್ನು ಹುಡುಕುವ ಉತ್ಸಾಹ ತೋರುತ್ತಿದ್ದಾರೆ. ಜೀವನ ಪದ್ಧತಿಯಲ್ಲಿ ಯೋಗವೂ ಒಂದು ಅನಿವಾರ್ಯ ಎಂಬ ಕಲ್ಪನೆ ಮೂಡಬೇಕಾಗಿದೆ. ಯೋಗ ಸೂತ್ರಗಳನ್ನು ಅಕಾಡೆಮಿಕ್ ಆಗಿ ತರುವಂತಹ ಚಿಂತನೆ ಅಗತ್ಯ ಎಂದರು.
ಮೊಂಕ್ವಾಂಗ್ ಡಿಜಿಟಲ್ ವಿ.ವಿ. ಉಪಕುಲಪತಿ ಡಾ. ಜುಂಗ್ ಸೋನ್‌ಸಿಯೋ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ ಇದ್ದರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡೀನ್ ಡಾ. ಶಿವಪ್ರಸಾದ್ ವಂದಿಸಿದರು. ಜಾಸ್ಮಿನ್ ಮತ್ತು ಮೇಘಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

