ಮಧ್ವಕಟ್ಟೆ ಐತಿಹಾಸಿಕ ಸ್ಮಾರಕ ನಿರ್ಮಾಣ; ಪೇಜಾವರಶ್ರೀ
ಬಂಟ್ವಾಳ: ಧರ್ಮಸ್ಥಾಪಕ ಶ್ರೀ ಮಧ್ವಾಚಾರ್ಯರು ವಿಶ್ರಾಂತಿ ಪಡೆದ ತುಳುನಾಡಿನ ಮಧ್ವಕಟ್ಟೆಯನ್ನು ಐತಿಹಾಸಿಕ ಸ್ಮಾರಕವಾಗಿ ನಿರ್ಮಿಸಲಾಗುವುದು ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು. ಕಾವಳಪಡೂರು ಗ್ರಾಮದ ಮಧ್ವದಲ್ಲಿರುವ ಮಧ್ವಕಟ್ಟೆಯ ಜೀರ್ಣೋದ್ಧಾರ ಪ್ರಯುಕ್ತ ಇತ್ತೀಚೆಗೆ ಜರಗಿದ ಪೂರ್ವಭಾವಿ ಚಿಂತನಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 800 ವರ್ಷಗಳ ಹಿಂದೆ ಮಧ್ವಾಚಾರ್ಯರು ಪಾದಯಾತ್ರೆಯಲ್ಲಿ ಪ್ರವಾಸ ಸಂದರ್ಭ ಧರ್ಮಸ್ಥಳದೆಡೆಗೆ ಸಾಗುವಾಗ ಮಧ್ವಕಟ್ಟೆಯಲ್ಲಿ ವಿಶ್ರಾಂತಿ ಪಡೆದಿರುವುದರಿಂದ ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಈ ಊರಿಗೆ ಮಧ್ವವೆಂದೇ ಹೆಸರಾಗಿದೆ. ಆದರೆ ಜನಪದ ರೂಢಿಯಿಂದ ಮದ್ದ ಎಂದು ಹೆಸರಾಗಿದೆ ಎಂದರು. ಮಧ್ವಕಟ್ಟೆಯಲ್ಲಿ ಜನೋಪಯೋಗಿ ಧರ್ಮಕಾರ್ಯಗಳಿಗೆ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಿ ಭಕ್ತ ಸಮೂಹಕ್ಕೆ ಧಾರ್ಮಿಕ ಶ್ರದ್ಧಾ ಕೇಂದ್ರವಾಗುವಂತೆ ಅಭಿವೃದ್ಧಿಗೊಳಿಸಲಾಗುವುದು ಎಂದು ನುಡಿದರು. ಈ ಕಾರ್ಯಕ್ಕೆ ಮಠದಿಂದ ಸಂಪೂರ್ಣ ನೆರವನ್ನು ನೀಡಲಾಗುತ್ತಿದ್ದು ಭಕ್ತರ ಸಹಕಾರದಲ್ಲಿ ಮುಂದಿನ ಪರ್ಯಾಯದ ಮೊದಲು ವ್ಯವಸ್ಥೆಗೊಳಿಸಲಾಗುವುದು ಎಂದು ಹೇಳಿದರು.
ದೈವಜ್ಞ ಕೆಮ್ಮಣ್ಣು ಪ್ರಸನ್ನ ಆಚಾರ್ಯ ಅವರು ಸಲಹೆ, ಮಾರ್ಗದರ್ಶನ ನೀಡಿದರು. ಶ್ರೀಗಳ ಆಪ್ತ ರಾಘವೇಂದ್ರ ಭಟ್ ಮದ್ದಡ್ಕ, ಹಿರಿಯರಾದ ಕೆ.ಎಲ್. ಆಚಾರ್ಯ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

