ದಕ್ಷಿಣ ಕನ್ನಡ

ರಂಗನಾಥ ಶರ್ಮ ನಿಧನಕ್ಕೆ ಸಂತಾಪ

Published On :

ಮಂಗಳೂರು: ಮಹೋಪಾಧ್ಯಾಯ ವಿದ್ವಾನ್ ಡಾ.ಎನ್.ರಂಗನಾಥ ಶರ್ಮರ ನಿಧನ ವಿದ್ವತ್ ಲೋಕಕ್ಕೆ ಆಘಾತವುಂಟು ಮಾಡಿದೆ. ಅವರು ಈ ಕಾಲಘಟ್ಟದ ಅಪ್ರತಿಮೆ ವಿದ್ವಾಂಸರಾಗಿದ್ದರು. ಸನಾತನ ಭಾರತೀಯ ಶಾಸ್ತ್ರಗಳ ಅಮೂಲಾಗ್ರ ಅಧ್ಯಯನ ಮಾಡಿ ಪರಂಪರೆಯ ಕೊಂಡಿಯಾಗಿದ್ದರು ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಅನೇಕ ಗ್ರಂಥಗಳನ್ನು ರಚಿಸಿ ಸಂಸ್ಕೃತಿಗೆ ಹೊಸ ಬೆಳಕು ನೀಡಿದ್ದರು. ಸಹಸ್ರಾರು ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ ಆಚಾರ್ಯ ಪರಂಪರೆಯನ್ನು ಬೆಳೆಸಿದ್ದರು. ಸಂಸ್ಕೃತದಲ್ಲಷ್ಟೇ ಅಲ್ಲದೆ ಕನ್ನಡದಲ್ಲೂ ವಿಶಿಷ್ಠ್ಯ ಪಾಂಡಿತ್ಯವನ್ನು ಸಂಪಾದಿಸಿದ ಎರಡು ಭಾಷೆಗಳ ಸಂವಹನ ಸೇತುವಾಗಿದ್ದರು ಎಂದು ತಿಳಿಸಿದ್ದಾರೆ.
ಡಬ್ಬಿಂಗ್ ವಿರೋಧಿ ನಿಲುವಿಗೆ ಕಸಾಪ ಬದ್ಧ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಡಬ್ಬಿಂಗ್ ವಿರೋಧಿ ನಿಲುವಿಗೆ ಸದಾ ಬದ್ಧ. ಮಾತ್ರವಲ್ಲ ಡಬ್ಬಿಂಗ್ ವಿರೋಧಿಸಿ ಕನ್ನಡಪರ ಸಂಘಟನೆಗಳು ಜ.27ರಂದು ನಡೆಸಲಿರುವ ಹೋರಾಟವನ್ನೂ ಪರಿಷತ್ ಬೆಂಬಲಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ಡಬ್ಬಿಂಗ್ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದ್ದು, ಅದಕ್ಕೆ ಸಾಹಿತ್ಯ ಪರಿಷತ್ತು ಈಗಲೂ ಬದ್ಧ. ಪರಿಷತ್ತು ಡಬ್ಬಿಂಗ್ ಅನ್ನು ವಿರೋಧಿಸುವ ಜತೆಗೆ ಕಲಾತ್ಮಕ, ಸಾಂಸ್ಕೃತಿಕ, ಮೌಲ್ಯಯುತ ಕನ್ನಡ ಚಿತ್ರಗಳು ಬರಬೇಕು ಎಂದು ಬಯಸುತ್ತಿದೆ. ಕನ್ನಡ ಚಲನಚಿತ್ರಗಳು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವಂಥವಾಗಿರಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.