ಗ್ಯಾಸ್ ಪೈಪ್ಲೇನ್ಗೆ ಜಾಗ ಬಿಡಲು ಗ್ರಾಮಸ್ಥರ ನಕಾರ, ಸಭೆ ಬಹಿಷ್ಕಾರ
ಮಂಗಳೂರು: ಪ್ರಸ್ತಾವಿತ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ಗೆ ಜಾಗ ಬಿಟ್ಟುಕೊಡಲು ಮಂಗಳೂರಿನಲ್ಲೂ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ಯೋಜನೆಗೂ ಸಾರ್ವಜನಿಕರ ಅಹವಾಲು ಕೇಳಬೇಕಿಲ್ಲ ಎಂಬ ಎಚ್ಪಿಸಿಎಲ್ ಅಧಿಕಾರಿಯೊಬ್ಬರ ಹೇಳಿಕೆಯಿಂದ ಆಕ್ರೋಶಿತರಾದ ಸ್ಥಳೀಯರು ಸಭೆ ಬಹಿಷ್ಕರಿಸಿದ ವಿದ್ಯಮಾನ ನಡೆಯಿತು.
ಗುರುಪುರ, ಮರವೂರು ಪರಿಸರದ ಸ್ಥಳೀಯರ ಮನಒಲಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಪಾಲ್ಗೊಂಡ ಸ್ಥಳೀಯರು, ಶೇ.100 ಪರಿಹಾರ ಕೊಟ್ಟು ಭೂಸ್ವಾಧೀನ ಮಾಡಿಕೊಳ್ಳಿ, ಇಲ್ಲವಾದರೆ ಈಗಿನ ಷರತ್ತಿನಂತೆ ಜಾಗ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತ ನಿರಾಕರಿಸಿದರು. ಇದಕ್ಕೂ ಮೊದಲು ಎಚ್ಪಿಸಿಎಲ್ ಅಧಿಕಾರಿ ಪೈಪ್ಲೈನ್ ಯೋಜನೆ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರಿಸಿದರು. ನಂತರ ಸ್ಥಳೀಯರು ಒಬ್ಬೊಬ್ಬರಾಗಿ ಅಹವಾಲು ಮಂಡಿಸಿದರು. ಯೋಜನೆ ಆರಂಭಕ್ಕೆ ಮೊದಲೇ ಸಾರ್ವಜನಿಕರಿಂದ ಅಹವಾಲು ಪಡೆಯಬೇಕಿತ್ತು, ಅದರ ಬದಲು ಹೋರಾಟಕ್ಕೆ ಮುಂದಾದ ಬಳಿಕ ಅಹವಾಲು ಕೇಳುವುದಿಲ್ಲ ಎಂದು ಸ್ಥಳೀಯ ಕೃಷ್ಣಪ್ರಸಾದ್ ರೈ ಆರೋಪಿಸಿದರು. ಇವರ ಮಾತಿಗೆ ಇಸ್ಮಾಯಿಲ್, ದಿನೇಶ್ ಕುಮಾರ್ ಆಳ್ವ ದನಿಗೂಡಿಸಿದರು. ಎಲ್ಲ ಯೋಜನೆಗೆ ಅಹವಾಲು ಕೇಳಬೇಕಿಲ್ಲ ಎಂಬ ಅಧಿಕಾರಿಯ ಉತ್ತರಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿ ಹೇಳಿಕೆ ಸಮರ್ಥಿಸಲು ಮುಂದಾದಾಗ ಸ್ಥಳೀಯರು ಸಭೆ ಬಹಿಷ್ಕರಿಸಿದರು. ಇದರಿಂದ ಭೂ ಪರಿಹಾರ ನಿಗದಿ ಬಗ್ಗೆ ಚರ್ಚೆ ನಡೆಯಲಿಲ್ಲ. ವಿಶೇಷ ಭೂಸ್ವಾಧೀನಾಧಿಕಾರಿ ಕೃಷ್ಣಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

