ಕುಮಾರಧಾರಾ ಸೇತುವೆ ಮತ್ತೆ ಮುಳುಗಡೆ
Published On :
ಸುಬ್ರಹ್ಮಣ್ಯ: ಪಶ್ಚಿಮಘಟ್ಟ ಪ್ರದೇಶದಲ್ಲಿ ಶನಿವಾರ ಸಂಜೆಯಿಂದ ಹಠಾತ್ತನೆ ಸುರಿದ ಭಾರಿ ಜಡಿ ಮಳೆಯ ಪರಿಣಾಮ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಎರಡು ಬಾರಿ ಮುಳುಗಡೆಯಾಯಿತು. ಮಳೆಯಿಂದಾಗಿ ಗ್ರಾಮಾಂತರ ಪ್ರದೇಶದ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ.
ಹಗಲು- ರಾತ್ರಿ ನಿರಂತರ ಸುರಿದ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಶನಿವಾರ ರಾತ್ರಿ ಮುಳುಗಡೆಗೊಂಡಿದ್ದ ಕುಮಾರಧಾರಾ ಸೇತುವೆ ಭಾನುವಾರ ಮುಂಜಾನೆ ಮತ್ತೆ ಮುಳುಗಡೆಗೊಂಡು ಮಧ್ಯಾಹ್ನದ ತನಕವೂ ಮುಂದುವರಿದಿತ್ತು. ರಸ್ತೆಯ ಇಕ್ಕಡೆಗಳಲ್ಲಿ ಜನರು ವಾಹನಗಳೊಂದಿಗೆ ಸಾಲು ಗಟ್ಟಿ ನಿಂತ ದೃಶ್ಯ ಕಂಡುಬಂತು. ಪ್ರವಾಹದಿಂದಾಗಿ ಯಾತ್ರಾರ್ಥಿಗಳು ರಸ್ತೆಯಲ್ಲೇ ಸಿಲುಕಿದ್ದು, ಸಂಕಷ್ಟಕ್ಕೀಡಾಗಿದ್ದಾರೆ.
ಅಂಗಡಿಗಳು ಜಲಾವೃತ: ಕುಮಾರಧಾರಾ ನದಿ ಸ್ನಾನ ಘಟ್ಟದ ಬಳಿಯ ಅಂಗಡಿ ಮುಂಗಟ್ಟುಗಳು ನೀರಿನಿಂದ ಆವೃತಗೊಂಡಿವೆ. ಪ್ರಯಾಣಿಕರಿಗೆ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಪರ್ಯಾಯ ದಾರಿಯಾಗಿರುವ ಪುತ್ತೂರು- ಪಂಜ ಸಂಪರ್ಕ ರಸ್ತೆ ಮಧ್ಯೆ ಪಂಜ ಸಮೀಪದ ಅಡ್ಡಹೊಳೆ ಎಂಬಲ್ಲಿಯ ಬೊಳ್ಮಲೆ ಸೇತುವೆ ಕೂಡ ಮುಳುಗಡೆಗೊಂಡಿದ್ದರಿಂದ ಸಂಚಾರಕ್ಕೆ ಮತ್ತಷ್ಟೂ ಅಡ್ಡಿ ಆತಂಕ ಎದುರಿಸಬೇಕಾಯಿತು. ಜನಸಾಮಾನ್ಯರ ಜನಜೀವನ ಸಂಪೂರ್ಣ ಹದೆಗೆಟ್ಟಿದೆ. ಕುಕ್ಕೆ ಸುತ್ತಮುತ್ತ ರಾತ್ರಿಯಿಡಿ ಸುರಿದ ಭಾರಿ ಮಳೆ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಭಾನುವಾರವಾದ್ದರಿಂದ ಶಾಲೆ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು ಸಂಕಷ್ಟದಿಂದ ಪಾರಾಗಿದ್ದಾರೆ.
ಹಲವೆಡೆ ತೋಟಗಳಿಗೆ ನೀರು ನುಗ್ಗಿ ಸಮುದ್ರದಂತೆ ಕಂಡುಬಂದಿದೆ. ಅಲ್ಲಲ್ಲಿ ಚಿಕ್ಕಪುಟ್ಟ ಸೇತುವೆಗಳು ಮುಳುಗಿ ಸಂಪರ್ಕ ಕಡಿತಗೊಂಡಿವೆ. ವಾಹನಗಳು ರಸ್ತೆ ಅಂಚಿನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದವು. ಹರಿಹರ- ಕೊಲ್ಲಮೊಗ್ರು ಸಂಪರ್ಕ ರಸ್ತೆಯ ಹಳೆ ದೂರವಾಣಿ ಕೇಂದ್ರ ಬಳಿ ಹರಿಯುವ ಕಲ್ಮಕಾರು ನದಿಯ ನೀರು ರಸ್ತೆಗೆ ಹರಿದಿದ್ದರಿಂದ ಸಂಪರ್ಕ ಕಡಿತಗೊಂಡು ವಾಹನ ಸಂಪರ್ಕ ಕಡಿತಗೊಂಡಿದೆ. ಹರಿಹರ ಮುಖ್ಯ ಪೇಟೆ ತನಕ ನೀರು ಹರಿದಿದ್ದು, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪ್ರವಾಹ ಬಂದಿರಲಿಲ್ಲ ಎಂದು ಸ್ಥಳಿಯರು ತಿಳಿಸಿದ್ದಾರೆ.
ಉರುಳಿದ ಮರಗಳು, ವಿವಿಧೆಡೆ ಹಾನಿ: ಇಲ್ಲಿನ ತೇಜಕುಮಾರ ಕಜ್ಜೋಡಿ ಎಂಬವರ ಮನೆ ಮುಂದೆ ಇದ್ದ ಹಲಸಿನ ಮರ ಉರುಳಿ ಬಿದ್ದಿದೆ. ಕೊಲ್ಲಮೊಗ್ರು ಕಟ್ಟ ಎಂಬಲ್ಲಿ ಕೂಡ ಮರವೊಂದು ಉರುಳಿ ಬಿದ್ದಿದೆ. ಹರಿಹರ ಪೇಟೆಯ ಬಳಿ ಇದ್ದ ಆಚಾರಿ ಕೊಟ್ಟಿಗೆಗೆ ನೀರು ನುಗ್ಗಿದೆ. ಸುಳ್ಯ- ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹಾಲೆಮಜಲು ಬಳಿ ರಸ್ತೆ ಕುಸಿದಿದೆ ಮತ್ತು ಹಾಲೆಮಜಲು ಶಾಲೆ ಬಳಿ ಮರವೊಂದು ಧರೆಗೆ ಉರುಳಿ ಬಿದ್ದಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.