ದಕ್ಷಿಣ ಕನ್ನಡ

ಮನೆಗೆ ನುಗ್ಗಲು ಯತ್ನಿಸಿ ವಿಫಲರಾದ ಬಳಿಕ ದಾಂದಲೆ ನಡೆಸಿದ ನಾಲ್ವರ ತಂಡ

Published On :

ಬಂಟ್ವಾಳ: ಮಹಿಳೆಯರಿದ್ದ ಮನೆಯೊಂದಕ್ಕೆ ನಾಲ್ವರು ವ್ಯಕ್ತಿಗಳು ನುಗ್ಗಲು ಯತ್ನಿಸಿ, ಬಳಿಕ ಮನೆಗೆ ಸೋಡ ಬಾಟಲಿ, ಕಲ್ಲುಗಳನ್ನು ಎಸೆದು ದಾಂದಲೆ ನಡೆಸಿದ ಘಟನೆ ಕಲ್ಲಡ್ಕ ಸಮೀಪದ ಗೋಳ್ತಮಜಲು ಸಮೀಪ ಮಂಗಳವಾರ ಮಧ್ಯೆರಾತ್ರಿ ನಡೆದಿದೆ. ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಡ್ಕ ಸಮೀಪದ ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆ ಸಮೀಪದ ನಿವಾಸಿ ಅಸ್ಮಾ ಎಂಬವರಿಗೆ ಸೇರಿದ ಮನೆಗೆ ಮಂಗಳವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಬಂದ ಸ್ಥಳೀಯ ನಾಲ್ವರು ವ್ಯಕ್ತಿಗಳು ಮನೆಯ ಬಾಗಿಲು ತೆಗೆಯುವಂತೆ ಬೊಬ್ಬೆ ಹಾಕಿದರು. ಮನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಮನೆಯ ಒಬ್ಬ ಯುವಕ ಮಾತ್ರ ಇದ್ದು, ಇದರಿಂದ ಭಯಭೀತರಾದ ಮನೆಯವರು ಬಾಗಿಲು ತೆರೆಯಲು ಮುಂದಾಗಲಿಲ್ಲ. ಇದರಿಂದ ಆಕ್ರೋಶಿತರಾದ ಅವರು ಬಾಗಿಲಿಗೆ ಕಾಲಿನಿಂದ ಒದ್ದಿದ್ದಾರೆ. ಬಳಿಕ ಮನೆಯ ಎರಡು ಕಿಟಕಿಯ ಗಾಜನ್ನು ಪುಡಿಗಟ್ಟಿದ್ದು, ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಠಾಣೆಗೆ ಯಾವುದೇ ದೂರು ಬಂದಿಲ್ಲ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.