ಮಲೇರಿಯಾ ನಿಯಂತ್ರಣ; ಸಾರ್ವಜನಿಕರಿಗೆ ಸೂಚನೆ
ಮಂಗಳೂರು: ಮಲೇರಿಯಾ ನಿಯಂತ್ರಣಕ್ಕೆ ಮನೆ ಹಾಗೂ ಸುತ್ತಮುತ್ತಲಿನ ಆವರಣದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಸ್ವಯಂ ಪ್ರೇರಿತರಾಗಿ ಸೊಳ್ಳೆ ನಿರ್ಮೂಲನ ಮಾಡಿ' ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. ಪಾಲಿಕೆಯ ಮಲೇರಿಯಾ ನಿಯಂತ್ರಣ ಘಟಕದ ಕಾರ್ಯಕರ್ತರು ಮತ್ತು ಸಿಬ್ಬಂದಿ ಮಲೇರಿಯಾ ನಿಯಂತ್ರಣ ಸಮೀಕ್ಷೆ ನಡೆಸಲು ಮನೆ ಭೇಟಿ ನೀಡಿದಾಗ ಸಹಕರಿಸಿ. ನಿರುಪಯುಕ್ತ ಕಡೆಯುವ ಕಲ್ಲು, ಎಳನೀರು ಚಿಪ್ಪುಗಳನ್ನು ಕವುಚಿ ಹಾಕಬೇಕು. ಟಯರ್ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಟ್ಯಾಂಕ್ನ್ನು ವಾರಕ್ಕೊಂದು ಬಾರಿ ಶುಚಿಗೊಳಿಸಬೇಕು. ಟಿನ್, ಬಕೆಟ್ಗಳಲ್ಲಿ ನೀರನ್ನು ವಾರಕ್ಕಿಂತ ಹೆಚ್ಚು ಕಾಲ ಇಡದೆ, ಉಪಯೋಗಿಸಿದ ನಂತರ ಕವುಚಿ ಹಾಕಬೇಕು. ಮನೆಯ ಹೂದಾನಿಗಳ ಕೆಳಗಿರುವ ತಟ್ಟೆಗಳಲ್ಲಿ ವಾರಕ್ಕಿಂತ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಎಸಿ, ಕೂಲರ್ಗಳಲ್ಲಿ ಶೇಖರಣೆಗೊಳ್ಳುವ ನೀರನ್ನು ಖಾಲಿ ಮಾಡಬೇಕು. ಬಾವಿಗಳಿಗೆ ಸೊಳ್ಳೆ ಮರಿ ತಿನ್ನುವ ಗಪ್ಪಿ ಮೀನನ್ನು ಹಾಕಬೇಕು.
ಮಲೇರಿಯಾ ಪತ್ತೆಗೆ ತ್ವರಿತ ಚಿಕಿತ್ಸೆ: ಜ್ವರ ಕಂಡುಬಂದಲ್ಲಿ ತಕ್ಷಣ ಮಲೇರಿಯಾ ರಕ್ತ ತಪಾಸಣೆ ನಡೆಸಬೇಕು. ಖಚಿತ ಪಟ್ಟಲ್ಲಿ ತೀವ್ರ ಚಿಕಿತ್ಸೆ ಅಗತ್ಯವಾಗಿ ತೆಗೆದುಕೊಳ್ಳಬೇಕು. ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ತಪಾಸಣೆ ಹಾಗೂ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಕೇಂದ್ರ: ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಲಾಲ್ಬಾಗ್, ಲೇಡಿಹಿಲ್ ಆರೋಗ್ಯ ಕೇಂದ್ರ, ಜೆಪ್ಪು ಔಷಧಾಲಯ, ಶಕ್ತಿನಗರ-ರಮಾಶಕ್ತಿ ಮಿಷನ್, ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆ, ಮಂಗಳೂರು ರೈಲ್ವೆ ಸ್ಟೇಶನ್ ಜಿಲ್ಲಾ ಪ್ರಯೋಗಲಾಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

