ದಕ್ಷಿಣ ಕನ್ನಡ

ಎಂಡೋ ಪುನರ್ವಸತಿ ನೈಜ ಮಾಹಿತಿ ಸರ್ಕಾರಕ್ಕೆ: ಆರೋಗ್ಯ ಇಲಾಖೆ ಸ್ಪಷ್ಟನೆ

Published On :

ಮಂಗಳೂರು: ಹೈಕೋರ್ಟ್ ಹಾಗೂ ಸರ್ಕಾರದ ಆದೇಶದಂತೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪುನರ್ವಸತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಕಾಲಕಾಲಕ್ಕೆ ಸರ್ಕಾರಕ್ಕೆ ನೈಜ ವರದಿ ಸಲ್ಲಿಸಲಾಗುತ್ತಿದೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.  ಜಿಲ್ಲೆಯಿಂದ ಸಲ್ಲಿಸಲ್ಪಟ್ಟ ವರದಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸುತ್ತದೆ. ಹೈಕೋರ್ಟ್ ಅಮಿಕಸ್ ಕ್ಯೂರಿ ನೇಮಿಸಿದ್ದು, ಸರ್ಕಾರದ ವರದಿಯನ್ನು ಪರಿಶೀಲಿಸುತ್ತಿದೆ. ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ತಿಳಿಸಿದೆ.  ಬಿಟ್ಟುಹೋದ ಸಂತ್ರಸ್ತರನ್ನು ಹೊಸದಾಗಿ ಗುರುತಿಸಲು ಅವಕಾಶವಿದ್ದು, ವಾರದ ಪ್ರತಿ ಸೋಮವಾರ ಹಾಗೂ ಮಂಗಳವಾರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ತಜ್ಞರಿಂದ ತಪಾಸಣೆ ನಡೆಸಿ ಸೇರ್ಪಡೆಗೊಳಿಸಲಾಗುತ್ತಿದೆ. ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಆಹಾರ ನೀಡುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದ್ದು, ಪ್ರಗತಿಯಲ್ಲಿದೆ.  2012ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2,200 ಮಂದಿ ಎಂಡೋ ಸಂತ್ರಸ್ತರಿದ್ದು, 2014ರಲ್ಲಿ ನಡೆಸಿದ ಸಮೀಕ್ಷೆಲ್ಲಿ ಹೊಸದಾಗಿ 796 ಮಂದಿಯನ್ನು ಸೇರಿಸಲಾಗಿದೆ. 2996 ಮಂದಿ ಸಂತ್ರಸ್ತರಿಗೆ ಗುರುತಿನ ಚೀಟಿ ನೀಡಲಾಗಿದೆ. ಕೊಕ್ಕಡ, ಆಲಂಕಾರಿನಲ್ಲಿ ಎಂಡೊ ಸಂತ್ರಸ್ತರ ಪಾಲನಾ ಕೇಂದ್ರವಿದ್ದು, ಉಜಿರೆ, ಬೆಳ್ಳಾರೆ, ಪಾಣಾಜೆಗಳಲ್ಲಿ ಹೊಸದಾಗಿ ಪಾಲನಾ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆಲಂಕಾರಿನಲ್ಲಿ 5 ಎಕರೆ ಜಾಗ ಶಾಶ್ವತ ಪುನರ್ವಸತಿ ಕೇಂದ್ರಕ್ಕೆ ಕಾದಿರಿಸಲಾಗಿದೆ. ಸಂತ್ರಸ್ತರು ಹೆಚ್ಚಾಗಿರುವ 7 ಆರೋಗ್ಯ ಕೇಂದ್ರಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ವಿಶೇಷ ತಜ್ಞರ ಶಿಬಿರ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೊಂಕಣ ರೈಲ್ವೆ: ರು. 3.52
ಲಕ್ಷ ದಂಡ ವಸೂಲಿ
ಮಂಗಳೂರು: ಟಿಕೆಟ್ ರಹಿತ ಪ್ರಯಾಣ ಸೇರಿದಂತೆ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕೊಂಕಣ ರೈಲ್ವೆ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 180 ಮಂದಿಯಿಂದ ರು. 3.52 ಲಕ್ಷ ದಂಡ ವಸೂಲಿ ಮಾಡಿದೆ.  ರೈಲ್ವೆ ಸುರಕ್ಷತಾ ದಳ ಅಧಿಕಾರಿಗಳು, ರು. 1.08 ಲಕ್ಷ ಮೌಲ್ಯದ 3570 ಬಾಟಲಿಯಲ್ಲಿ ಅಕ್ರಮ ಮದ್ಯ ಸಾಗಾಟ ವಶಪಡಿಸಿದ್ದಾರೆ. ಅಕ್ರಮ ಪ್ರವೇಶ, ಸಮಾಜಬಾಹಿರ ಕೃತ್ಯವೇ ಮೊದಲಾದ ಪ್ರಕರಣಗಳಲ್ಲಿ 178 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, ರು. 1.96 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ರೈಲ್ವೆ ಸೊತ್ತು ಲೂಟಿ ಮಾಡಿದ ಇಬ್ಬರ ವಿರುದ್ಧ ಕೇಸು ದಾಖಲಿಸಿದೆ.  ಹೆತ್ತವರಿಂದ ದೂರವಾಗಲು ಯತ್ನಿಸಿದ 7 ಮಂದಿ ಮಕ್ಕಳನ್ನು ಮರಳಿ ಹೆತ್ತವರ ವಶಕ್ಕೆ ಒಪ್ಪಿಸಲಾಗಿದೆ. ಟಿಕೆಟ್ ತಪಾಸಣೆ ವೇಳೆ ಟಿಕೆಟ್‌ರಹಿತ ಪ್ರಯಾಣ ಮಾಡುತ್ತಿದ್ದ 93 ಮಂದಿಯಿಂದ ರು. 47,338 ದಂಡ ವಸೂಲಿ ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ವಿಭಾಗ ಪ್ರಕಟಣೆ
ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.