ದಕ್ಷಿಣ ಕನ್ನಡ

ಪಿಡಿಒ ನಿಯೋಜನೆ ವಿರೋಧಿಸಿ ಗ್ರಾ.ಪಂ. ಕಚೇರಿಗೆ ಬೀಗ ಇಂದು

Published On :

ಉಪ್ಪಿನಂಗಡಿ: ಐತ್ತೂರು ಗ್ರಾ.ಪಂ.ಗೆ ಪೂರ್ಣಕಾಲಿಕ ಪಿಡಿಒ ಆಗಿ ನೇಮಕಗೊಂಡವರನ್ನು ಕುಟ್ರುಪಾಡಿ ಗ್ರಾ.ಪಂ.ಗೆ ನಿಯೋಜಿಸಿರುವುದನ್ನು ವಿರೋಧಿಸಿ ಶನಿವಾರ ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಐತ್ತೂರು ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಐತ್ತೂರು ಗ್ರಾ.ಪಂ.ನಲ್ಲಿ ಕಳೆದ ಡಿಸೆಂಬರ್‌ನಿಂದ ಕೋರಂ ಕೊರತೆ ಹಾಗೂ ಗ್ರಾ.ಪಂ. ಉಪ ಚುನಾವಣೆ, ಲೋಕಸಭಾ ಚುನಾವಣೆ ಇತ್ಯಾದಿ ಕಾರಣಗಳಿಂದ ಸಾಮಾನ್ಯ ಸಭೆಯಾಗದೆ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದೆ. ಮಾ.19ರಂದು ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡು ಶ್ಯಾಮ್ ಪ್ರಸಾದ್ ಎಂ.ಆರ್. ಕರ್ತವ್ಯಕ್ಕೆ ಹಾಜರಾಗಿದ್ದು ಬಳಿಕ ಪಂಚಾಯಿತಿ ಕೆಲಸಗಳಿಗೆ ಚಾಲನೆ ದೊರೆತಿದೆ. ಐತ್ತೂರು, ಕೊಣಾಜೆ ಭಾಗಗಳಿಂದ ಅಗತ್ಯ ಕೆಲಸಗಳಿಗೆ ಬರಬೇಕಾದರೆ 55 ಕಿ.ಮೀ. ಕ್ರಮಿಸಿ ಬರುವಾಗ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಇಲ್ಲದಿದ್ದರೆ ಹೇಗಾಗುತ್ತದೆ? ಅಲ್ಲದೆ ಕುಟ್ರುಪಾಡಿ ಗ್ರಾ.ಪಂ. ಐತ್ತೂರು ಗ್ರಾ.ಪಂ.ಗಳು ದೂರದಲ್ಲಿದ್ದು ನಿಯೋಜನೆಗೊಳಿಸುವಾಗ ಹತ್ತಿರದ ಪಂಚಾಯಿತಿಗಳಿಂದ ನಿಯೋಜನೆಗೊಳಿಸಿ ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಲಿಲ್ಲ ಈ ಹಿನ್ನಲೆಯಲ್ಲಿ ಶನಿವಾರ ಪ್ರತಿಭಟಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.