ಕೊಂಕಣಿ ಕುಟುಮ್ ಪ್ರಶಸ್ತಿಗೆ ಸಿರಿಲ್ ಗ್ರೆಗರಿ ಸಿಕ್ವೇರ ಆಯ್ಕೆ
ಮಂಗಳೂರು: ಕೊಂಕಣಿ ಕುಟಮ್ ಬಾಹ್ರೇಯ್ನ್ ವತಿಯಿಂದ ಕೊಡಮಾಡುವ 13ನೇ ಕೊಂಕಣಿ ಕುಟಮ್ ಪ್ರಶಸ್ತಿಗೆ ಕೊಂಕಣಿ ಹಾಸ್ಯ ಸಾಹಿತಿ ಸಿರಿಲ್ ಗ್ರೆಗರಿ ಸಿಕ್ವೇರ ಅವರು ಆಯ್ಕೆಯಾಗಿದ್ದಾರೆ. ಜು.26 ರಂದು ಸಂಜೆ 6.30 ಗಂಟೆಗೆ ಬೆಂದೂರ್ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗೋವಾ ಕೊಂಕಣಿ ಅಕಾಡೆಮಿ ಅಧ್ಯಕ್ಷ ಪುಂಡಲೀಕ್ ನಾಯ್ಕ್ ಅಧ್ಯಕ್ಷತೆ ವಹಿಸುವರು. ನರೇಂದ್ರ ರೈ ದೇರ್ಲ, ಕೊಂಕಣಿ ಸಾಹಿತಿ ಎಡಿ ನೆಟ್ಟೊ ಪಾಲ್ಗೊಳ್ಳುವರು ಎಂದು ಸಮಿತಿ ಸ್ಥಳೀಯ ಸಂಚಾಲಕ ರಿಚರ್ಡ್ ಮೊರಾಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೊಂಕಣಿ ಭಾಷೆಗೆ ನೀಡಿದ ಸೇವೆ ಪರಿಗಣಿಸಿ ಜೀವಮಾನ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರು. 50 ಸಾವಿರ ನಗದು ಮತ್ತು ಪ್ರಶಸ್ತಿ, ಪ್ರಮಾಣಪತ್ರ ಒಳಗೊಂಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸ್ಯಾನಿ ಲೋಬೊ, ಮೆಲ್ವಿನ್ ರೋಡ್ರಿಗಸ್, ಜ್ಯೊ ಕುವೆಲ್ಲೊ ಇದ್ದರು.
ಮೂಲ್ಕಿ: ಬ್ಯಾಂಕ್‌ಗೆ ನಕಲಿ ಚಿನ್ನ ನೀಡಿ ವಂಚನೆ
ಮೂಲ್ಕಿ: ಬ್ಯಾಂಕ್‌ಗೆ ನಕಲಿ ಚಿನ್ನ ನೀಡಿ 4 ಲಕ್ಷ ಸಾಲ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. 2013ರ ಸೆಪ್ಟಂಬರ್ 16ರಂದು ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಕಿನ್ನಿಗೋಳಿಯ ಸುರೇಂದ್ರ ಆಚಾರ್ಯ ಎಂಬವರು 26 ಬಳೆ, ನಾಲ್ಕು ಚಿನ್ನ ಹಾಗೂ 1 ಉಂಗುರ ಸೇರಿದಂತೆ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು ಅದರ ಮೇಲೆ 4 ಲಕ್ಷ ಸಾಲ ಪಡೆದಿದ್ದರು. ಇತ್ತೀಚೆಗೆ ಬ್ಯಾಂಕ್‌ಗೆ ಹೊಸದಾಗಿ ಬಂದಿರುವ ಹಿರಿಯ ಪ್ರಬಂಧಕ ಟಿ.ಎಂ. ಜಯಕೃಷ್ಣ ಅವರು ಬಂದಿದ್ದು, ಚಿನ್ನವನ್ನು ಪರಿಶೀಲನೆ ನಡೆಸುತ್ತಿದ್ದಾಗ ಇದು ನಕಲಿ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಚಿನ್ನವನ್ನು ಅಸಲಿ ಎಂದು ದೃಢೀಕರಿಸಿದ್ದ ಬ್ಯಾಂಕ್ ಸರಾಫರಾದ ತಿಮ್ಮಪ್ಪಯ್ಯ ಆಚಾರ್ಯ ಸುರೇಂದ್ರ ಆಚಾರ್ಯರೊಂದಿಗೆ ಸೇರಿ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಜಯಕೃಷ್ಣನ್ ಅವರು ಮೂಲ್ಕಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

