ದಕ್ಷಿಣ ಕನ್ನಡ

ಯೇನೆಪೊಯಕ್ಕೆ ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ

Published On :

ಮಂಗಳೂರು: ಬ್ರಿಟನ್ ಪಾರ್ಲಿಮೆಂಟ್ ಸದಸ್ಯ ಬಾಬ್ ಬ್ಲಾಕ್‌ಮೆನ್ ಅವರು ಇತ್ತೀಚೆಗೆ ಲಂಡನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಯೇನೆಪೊಯ ವಿಶ್ವವಿದ್ಯಾಲಯಕ್ಕೆ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಪ್ರಮಾಣಪತ್ರ ನೀಡಿದೆ.
ಸಂಸ್ಥೆಯ ವಿದ್ಯಾಭ್ಯಾಸ ಕ್ರಮ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ಸಂಶೋಧನೆ ಕುರಿತು ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ರಿಜಿಸ್ಟ್ರಾರ್ ಡಾ.ಸಿ.ವಿ. ರಘುವೀರ್ ಹೇಳಿದರು. ಜಗತ್ತಿನ ಅತ್ಯುತ್ತಮ ಸಂಸ್ಥೆಗಳಿಗೆ ಸರಿಸಮಾನಾದ ಸಂಸ್ಥೆಗಳೆಂದು ಸಿಲ್ಕ್ ಟ್ರೀ ನೊಲೆಡ್ಜ್ ಕನ್ಸಾರ್ಟಿಯಂ ಭಾರತದ 20 ವಿಶ್ವವಿದ್ಯಾಲಯಗಳನ್ನು ಆರಿಸಿದೆ. ಕಾಲೇಜನ್ನು ಪ್ರತಿನಿಧಿಸಿ ಜೂ. 24 ರಂದು ಪ್ರಶಸ್ತಿ ಸ್ವೀಕರಿಸಲಾಗಿದೆ. ಈ ಪ್ರಶಸ್ತಿಯಿಂದ 2014-16ರವರೆಗೆ 'ಗ್ರೇಟ್ ಪ್ಲೇಸ್ ಟು ಸ್ಟಡಿ-ಇಂಡಿಯಾ ಎಡಿಶನ್‌' ಎಂಬ ಲಾಂಛನ ಉಪಯೋಗಿಸಬಹುದು ಎಂದು ಯೇನೆಪೊಯ ವಿಶ್ವವಿದ್ಯಾಲಯ ಮಾಜಿ ಕುಲಸಚಿವ ಡಾ. ರವಿ ವಾಸ್ವಾನಿ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.