ದಕ್ಷಿಣ ಕನ್ನಡ

ಬ್ಯಾಡ್ಮಿಂಟನ್: ರಾಷ್ಟ್ರೀಯ ಶ್ರೇಯಾಂಕಿತ ಆಟಗಾರರು ಮುಂದಿನ ಸುತ್ತಿಗೆ ಪ್ರವೇಶ

Published On :

ಉಡುಪಿ: ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಪ್ರಥಮ ಬಾರಿಗೆ ಬೇರೆಡೆ ರಾಷ್ಟ್ರೀಯ ಸಬ್ ಜ್ಯೂನಿಯರ್ ಬ್ಯಾಡ್ಮಿಂಟನ್ ಪಂದ್ಯಗಳು ಉಡುಪಿಯಲ್ಲಿ ನಡೆಯುತ್ತಿದ್ದು, ಬುಧವಾರ ಆರಂಭವಾದ ಪಂದ್ಯಗಳಲ್ಲಿ ಬಹುತೇಕ ರಾಷ್ಟ್ರೀಯ ಶ್ರೇಯಾಂಕಿತ ಆಟಗಾರರು ಮೊದಲ ಸುತ್ತನ್ನು ಸುಲಭವಾಗಿ ಗೆದ್ದು ಮುಂದಿನ ಸುತ್ತಿಗೆ ಕಾಲಿಟ್ಟಿದ್ದಾರೆ.
 ಹುಡುಗರ 13 ವರ್ಷ ವಯೋವಾನದ ವಿಭಾಗದಲ್ಲಿ 1ನೇ ಶ್ರೇಯಾಂಕದ ಮೈಸ್ನಮ್ ಮೈರುಭಾ (ಮಣಿಪುರ), 4ನೇ ಶ್ರೇಯಾಂಕದ ರೋಹನ್ ಗುರ್ಬಾನಿ (ಮಹಾರಾಷ್ಟ್ರ), 5ನೇ ಶ್ರೇಯಾಂಕದ ಪ್ರಿಯಾಂಶು ರಾವತ್ (ಮಧ್ಯಪ್ರದೇಶ), 6ನೇ ಶ್ರೇಯಾಂಕದ ಜಯಂತ್ ರಾಣಾ (ಹರಿಯಾಣ), 8ನೇ ಶ್ರೇಯಾಂಕದ ರಿತೀನ್ (ಆಂಧ್ರ) ತಮ್ಮ ಎದುರಾಳಿ ಶ್ರೇಯಾಂಕ ರಹಿತ ಆಟಗಾರರನ್ನು ಸುಲಭವಾಗಿ ಮಣಿಸಿದ್ದಾರೆ.
 ಆದರೆ, ಇದೇ ವಿಭಾಗದಲ್ಲಿ 13ನೇ ಶ್ರೇಯಾಂಕದ ಸಹೃದಯ್ ಗೋಕರಪು ಅವರು ಶ್ರೇಯಾಂಕ ರಹಿತ ಜೈದಿತ್ಯಾ ಪ್ರತಾಪ್ ಸಿಂಗ್ (ಛತ್ತೀಸ್‌ಗಡ) ಅವರಿಂದ ಮತ್ತು 14ನೇ ಶ್ರೇಯಾಂಕದ ಇಶಾನ್ ಮಿತ್ತಲ್ (ಮಧ್ಯಪ್ರದೇಶ) ಮಾತ್ರ ಶ್ರೇಯಾಂಕ ರಹಿತ ಆಟಗಾರ ತನಿಷ್ಕ್ ಸಕ್ಸೇನಾ ಅವರಿಂದ ಸೋಲಿಸಲ್ಪಟ್ಟಿದ್ದಾರೆ.  13 ವರ್ಷದೊಳಗಿನ ಹುಡುಗಿಯ ವಿಭಾಗದಲ್ಲಿ 1ನೇ ಶ್ರೇಯಾಂಕದ ಸಿಮ್ರಾನ್ ಸಕ್ಸೇನಾ (ಮಹಾರಾಷ್ಟ್ರ), 4ನೇ ಶ್ರೇಯಾಂಕದ ಕವಿ ಪ್ರಿಯಾ (ಪಾಂಡಿಚೇರಿ), 5ನೇ ಶ್ರೇಯಾಂಕದ ಸ್ನೇಹಾ ರಾಜ್ವಾರ್ (ಉತ್ತರಾಂಚಲ) ಅವರು ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.