ದಕ್ಷಿಣ ಕನ್ನಡ

ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ರು. 1 ಸಾವಿರ ಕೋಟಿ

Published On :

ಮಂಗಳೂರು: ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೊಳಿಸಲು ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರು. 1 ಸಾವಿರ ಕೋಟಿ ಕಾದಿರಿಸಿದೆ ಎಂದು ಇಂಧನ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ನಿಶಿಕಾಂತ್ ದುಬೆ, ಬಿದ್ಯುತ್ ಬರಾನ್ ಮಹಾತೋ, ಪಿ.ಕೆ.ಬಿಜು ಇವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ನವೀಕರಿಸಬಹುದಾದ ವಿವಿಧ ರೀತಿಯ ಇಂಧನ ಮೂಲಗಳಿಂದ 2.45 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ನಿರ್ಧರಿಸಲಾಗಿದೆ. ಇದರಲ್ಲಿ 1 ಲಕ್ಷ ಮೆಗಾವ್ಯಾಟ್ ಪವನ ಮತ್ತು ಸೋಲಾರ್ ಶಕ್ತಿಯಿಂದ, 20 ಸಾವಿರ ಮೆಗಾವ್ಯಾಟ್ ಸಣ್ಣ ಜಲವಿದ್ಯುತ್ ಯೋಜನೆಯಿಂದ ಹಾಗೂ 25 ಸಾವಿರ ಮೆಗಾವ್ಯಾಟ್ ಬಯೋ-ಶಕ್ತಿ ಮೂಲದಿಂದ ವಿದ್ಯುತ್ ಉತ್ಪಾದಿಸಲು ತೀರ್ಮಾನಿಸಲಾಗಿದೆ. ಕಳೆದ ಸಾಲಿನಲ್ಲಿ ರು. 4325 ಮೆಗಾವ್ಯಾಟ್ ಗುರಿಯಲ್ಲಿ ರು. 3618.79 ಮೆಗಾವ್ಯಾಟ್ ಸಾಧನೆ ಮಾಡಲಾಗಿದೆ. ಕರ್ನಾಟಕದಲ್ಲಿ ಕಳೆದ ಸಾಲಿನಲ್ಲಿ ಸಣ್ಣ ಜಲವಿದ್ಯುತ್ ಯೋಜನೆ 67.90 ಮೆ.ವ್ಯಾ., ಗಾಳಿಯಿಂದ 183 ಮೆ.ವ್ಯಾ., ಬಯೋದಿಂದ 112 ಮೆ.ವ್ಯಾ., ಸೋಲಾರ್‌ನಿಂದ 17 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.