ರಾಷ್ಟ್ರೀಯ ಸಬ್ ಜ್ಯೂ. ಬ್ಯಾಡ್ಮಿಂಟನ್: ಮಣಿಪುರದ ಮೈಸ್ನಮ್ಗೆ ಪ್ರಶಸ್ತಿ
ಉಡುಪಿ: ಮಣಿಪಾಲದಲ್ಲಿ ನಡೆದ ರಾಷ್ಟ್ರೀಯ ಸಬ್ ಜ್ಯೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯದ ಬಾಲಕರ 13 ವರ್ಷದೊಳಗಿನ ವಿಭಾಗದಲ್ಲಿ ಭಾನುವಾರ ನಡೆದ ಸಿಂಗಲ್ಸ್ ಮತ್ತು ಡಬಲ್ಸ್ಗಳೆರಡರ ಫೈನಲ್ ಪಂದ್ಯದಲ್ಲಿ 1ನೇ ಶ್ರೇಯಾಂಕಿತ ಮೈಸ್ನಮ್ ಮೈರಬ್ (ಮಣಿಪುರ) ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಮೈಸ್ನಮ್ ತಮ್ಮ ಅಗ್ರ ಶ್ರೇಯಾಂಕಕ್ಕೆ ತಕ್ಕಂತೆ ಆಡಿ 3ನೇ ಶ್ರೇಯಾಂಕದ ಪವನ್ ಕೃಷ್ಣ ಥೋಕಲಾ ಅವರನ್ನು 21-18 ಮತ್ತು 21- 16 ನೇರ ಸೆಟ್ಟುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.
ಡಬಲ್ಸ್ನಲ್ಲಿ 1ನೇ ಶ್ರೇಯಾಂಕದ ಮೈಸ್ನಮ್- ಶ್ರೀಕರ್ ಮದಿನ ಜೋಡಿ 2ನೇ ಶ್ರೇಯಾಂಕದ ರಿತೀನ್ ಬಿ.- ಪವನ್ ಕೃಷ್ಣ ಥೋಕಲ ಜೋಡಿಯನ್ನು 13- 21, 21- 14, 21- 14 ಸೆಟ್ಟುಗಳಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಫಲಿತಾಂಶ: 15 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್ನಲ್ಲಿ ರಾಹುಲ್ ಭಾರದ್ವಾಜ್ ಬಿ.ಎಂ. ಪ್ರಥಮ, ಲಕ್ಷ್ಯ ಸೇನ್ ದ್ವಿತೀಯ, ಡಬಲ್ಸ್ನಲ್ಲಿ ಕೃಷ್ಣ ಪ್ರಸಾದ್ ಜಿ.- ಸಾತ್ವಿಕ್ ಸಾಯಿರಾಜ್ ಪ್ರಥಮ, ಪ್ರಗ್ನಾನ್ ಗೋಗೋಯ್- ಲಕ್ಷ್ಯ ಸೇನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
13 ವರ್ಷದ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ವೈಷ್ಣವಿ ರೆಡ್ಡಿ ಜಕ್ಕ ಪ್ರಥಮ, ಸಿಮ್ರನ್ ಸಿಂಗ್ ದ್ವಿತೀಯ, ಡಬಲ್ಸ್ನಲ್ಲಿ ರಿಚಾ ಮುಕ್ತಿಬೋಧ್- ಸಿಮ್ರನ್ ಸಿಂಗ್ ಪ್ರಥಮ, ವೈಷ್ಣವಿ ರೆಡ್ಡಿ ಜಕ್ಕ- ಗಾಯತ್ರಿ ಗೋಪಿಚಂದ್ ಪುಲೆ ದ್ವಿತೀಯ ಸ್ಥಾನ ಪಡೆದರು.
15 ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಪೂರ್ವ ಭರ್ವೆ ಪ್ರಥಮ, ರಿಯಾ ಅರೋಲ್ಕರ್ ದ್ವಿತೀಯ, ಡಬಲ್ಸ್ನಲ್ಲಿ ಅಶ್ವಿನಿ ಭಟ್ ಕೆ.- ಮಿಥುಲಾ ಯು.ಕೆ. ಪ್ರಥಮ, ಸಿಮ್ರನ್ ಸಿಂಗ್- ಗ್ರಿತಿಕ ಥಕರ್ ದ್ವಿತೀಯ ಸ್ಥಾನ ಗೆದ್ದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

