ಜನಪ್ರತಿನಿಧಿಗಳೇ, ಅಧಿಕಾರಿಗಳೇ ಗುಜ್ಜರಕೆರೆ ಅಭಿವೃದ್ಧಿ ಮರೆತಿರಾ?
ಮಂಗಳೂರು: ನಗರದ ಮಂಗಳಾದೇವಿ ಬಳಿಯ ಗುಜ್ಜರಕೆರೆ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದರೂ ಮಹಾನಗರ ಪಾಲಿಕೆ ಕೆರೆ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಿದೆ. ಕೆರೆಯ ತಡೆಗೋಡೆ ಜರಿದು ಸರಿಯಾದರೂ ಕೊಳಚೆ ನೀರು ನುಗ್ಗುವುದು ನಿಂತಿಲ್ಲ. ಇದನ್ನು ಕೂಡಲೇ ಸರಿಪಡಿಸುವ ಜಿಲ್ಲಾಧಿಕಾರಿ ಹೇಳಿಕೆಗೆ ಬೆಲೆ ಇಲ್ಲದಂತಾಗಿದೆ. ಮೇಯರ್, ಸ್ಥಳೀಯ ಪಾಲಿಕೆ ಸದಸ್ಯರು, ಶಾಸಕರು, ಸಂಸದರು, ಸಚಿವರು ಬಂದು ನೋಡಿಹೋಗುತ್ತಿದ್ದಾರೆಯೇ ವಿನಃ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ.
3.43 ಎಕರೆ ಜಾಗ ವಿಸ್ತಾರದಲ್ಲಿ ಕೆರೆ ಇದ್ದು, ಇದರ ಅಭಿವೃದ್ಧಿಗೆ ರಾಜ್ಯ ಸರ್ಕಾರ ರು. 3 ಕೋಟಿ ಮಂಜೂರು ಮಾಡಿತ್ತು. ಪಾಲಿಕೆಯಿಂದ ಗುಜ್ಜರಕೆರೆ ನೀಲ ನಕ್ಷೆ ತಯಾರಿಸಿ ಯಾವ್ಯಾವುದನ್ನು ಅಭಿವೃದ್ಧಿಪಡಿಸಬಹುದು ಎಂದು ಸೂಚಿಸಿತ್ತು. ಗುತ್ತಿಗೆದಾರರು ಕಾಮಗಾರಿ ಆರಂಭಿಸಿ ಮೂರು ವರ್ಷ ಕಳೆದಿದೆ, ಈಗಾಗಲೇ ರು. 25 ಲಕ್ಷ ಮುಗಿಸಿದ್ದಾರೆ. ಈಗ ಕಾಮಗಾರಿ ಪೂರ್ತಿಯಾಗದ್ದರಿಂದ ಕೆರೆಯ ಆವರಣ ಗೋಡೆ ಎರಡೂ ಕಡೆ ಕುಸಿದು ಬಿದ್ದಿತ್ತು, ಈಗ ಅದನ್ನು ಸರಿಪಡಿಸಲಾಗಿದೆ.
ಕೆರೆಯ ಮೇಲ್ಭಾಗದಲ್ಲಿ ಬೀಳುವ ಮಳೆನೀರು ಒಳಚರಂಡಿ ವ್ಯವಸ್ಥೆ ಇಲ್ಲದೆ ಕೆರೆಗೆ ಬೀಳುತ್ತಿದೆ. ಇದರಿಂದ ಕೆರೆ ಮತ್ತೆ ಮಲಿನಗೊಳ್ಳುತ್ತಲೇ ಇದೆ. ಇಚ್ಛಾಶಕ್ತಿಯ ಕೊರತೆಯಿಂದ ಗುಜ್ಜರಕೆರೆ ಅವನತಿಯತ್ತ ಸಾಗುತ್ತಿದೆ. ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಹೋರಾಟ ನಡೆಸುತ್ತಿದ್ದರೂ ಸರಿಯಾಗಿ ಸ್ಪಂದಿಸುವವರು ಇಲ್ಲವಾಗಿದೆ.
ಮೂಲ್ಕಿಯಲ್ಲಿ ಐಟಿಐ ಪ್ರಾರಂಭಿಸಿ
ಕಿನ್ನಿಗೋಳಿಯ ಸಮೀಪದ ತೋಕೂರಿನಲ್ಲಿ ಐಟಿಐ ಇರುವುದರಿಂದ ಕಿನ್ನಿಗೋಳಿಯಲ್ಲಿ ಪ್ರಾರಂಭಿಸಲಿರುವ ಐಟಿಐಯನ್ನು ಬಜ್ಪೆಗೆ ವರ್ಗಾಯಿಸಲು ಹುನ್ನಾರ ನಡೆಯುತ್ತಿದೆ.
ಮೂಲ್ಕಿ ಮೂಡುಬಿದಿರೆ ಶಾಸಕರೂ, ಸಚಿವರಾದ ಕೆ. ಅಭಯಚಂದ್ರ ಜೈನ್ರವರು ಮೂಲ್ಕಿ ಹೋಬಳಿಯ ಕಿನ್ನಿಗೋಳಿಯಲ್ಲಿ ಐಟಿಐ ಪ್ರಾರಂಭಿಸಲು ಶ್ರಮಿಸಿದ್ದು, ಅನುಮತಿಯೂ ದೊರಕಿದೆ. ಸಚಿವರು ಆ ಸರ್ಕಾರಿ ಐಟಿಐಯನ್ನು ಮೂಲ್ಕಿಗೆ ವರ್ಗಾಯಿಸಲಿ. ಮುಲ್ಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶಾಲ ಮೈದಾನ ಖಾಲಿ ತರಗತಿ ಕೊಠಡಿಗಳಿದ್ದು, ಸುತ್ತಮುತ್ತಲಿನ ಯುವಕರಿಗೆ ಅನುಕೂಲವಿದೆ. ಮೂಲ್ಕಿ ಜನತೆಗೆ ಅನುಕೂಲವಾಗುವಂತೆ ಐಟಿಐ ಪ್ರಾರಂಭಿಸಲು ಸಚಿವರು ಕ್ರಮ ಕೈಗೊಳ್ಳಲಿ.
ಹರಿಕೃಷ್ಣ ಪುನರೂರು, ಅಧ್ಯಕ್ಷ, ಮೂಲ್ಕಿ ನಾಗರಿಕ ಹೋರಾಟ ಸಮಿತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

