ದಕ್ಷಿಣ ಕನ್ನಡ

ರಥಬೀದಿಲಿ ಎಕ್ಸೆಲ್ ಫ್ರೇಮ್ ಆರ್ಟ್ ಗ್ಯಾಲರಿ

Published On :

ಮಂಗಳೂರು: ನಗರದ ರಥಬೀದಿಯ ಮಂಗಳಾ ಕಾಂಪ್ಲೆಕ್ಸ್‌ನಲ್ಲಿ ಎಕ್ಸೆಲ್ ಫ್ರೇಮ್ ಮತ್ತು ಆರ್ಟ್ ಗ್ಯಾಲರಿ ಭಾನುವಾರ ಉದ್ಘಾಟನೆಗೊಂಡಿತು. ದಶಕಗಳಿಗೂ ಹೆಚ್ಚು ಕಾಲ ಮಂಗಳೂರಲ್ಲಿ ಫ್ರೇಮ್‌ಗಳಿಂದ ಜನ ಮೆಚ್ಚಿಗೆ ಗಳಿಸಿರುವ ಎಕ್ಸೆಲ್ ಇದೀಗ ಅತ್ಯಾಧುನಿಕ ಗ್ಯಾಲರಿ ಆರಂಭಿಸಿದೆ.
ರಾಮದಾಸ್ ಎಲ್.ಕೆ.ಶೆವಗೂರ್ ಉದ್ಘಾಟಿಸಿದರು. ಮಣೇಲ್ ಅಣ್ಣಪ್ಪ ನಾಯಕ್, ಮಂಜು ನೀರೇಶ್ವಾಲ್ಯ ಇದ್ದರು.  ಗ್ಯಾಲರಿಯಲ್ಲಿ 500ಕ್ಕೂ ಹೆಚ್ಚು ನಮೂನೆಯ ಫ್ರೇಮ್‌ಗಳು ಲಭ್ಯವಿದೆ. ಅತ್ಯಾಧುನಿಕ ಫ್ರೇಮ್‌ಗಳು ಸಹಿತ ಪುರಾತನ ಶಾಸ್ತ್ರೀಯ ಫ್ರೇಮ್‌ಗಳು ಗ್ಯಾಲರಿಯಲ್ಲಿ ಕಾಣ ಸಿಗುತ್ತವೆ. ವಿಶೇಷ ಎಂದರೆ ಇಲ್ಲಿ ಗೌಡಸಾರಸ್ವತ ಬ್ರಾಹ್ಮಣರ ದೇವರ, ಗುರುಗಳ ಕುರಿತಾದ ಫ್ರೇಮ್‌ಗಳ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಕಲಾ ವಿಭಾಗದಲ್ಲಿ ಕ್ಯಾನ್ವಾಸ್ ಪ್ರಿಂಟ್‌ಗಳು, ಡಿಗ್ರಿ ಸರ್ಟಿಫಿಕೆಟ್‌ಗಳು, ಪ್ರಶಸ್ತಿ ಫ್ರೇಮ್‌ಗಳು, ಮರದ ಮತ್ತು ಫೈಬರ್ ಪ್ರೇಮ್‌ಗಳು, ಫೋಟೋ ಫ್ರೇಮ್‌ಗಳು ನಾನಾ ವಿನ್ಯಾಸದಲ್ಲಿ ಲಭ್ಯವಿದೆ ಎಂದು ಗ್ಯಾಲರಿ ಮಾಲೀಕ ಮಂಜು ನೀರೇಶ್ವಾಲ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.