ದಕ್ಷಿಣ ಕನ್ನಡ

ಸಂಪಾಜೆ ಶೀನಪ್ಪ ರೈಗೆ ಬಂಟ ಪ್ರತಿಷ್ಠಾನ ಪ್ರಶಸ್ತಿ

Published On :


ಮಂಗಳೂರು: ಜಾಗತಿಕ ಬಂಟ ಪ್ರತಿಷ್ಠಾನ ಟ್ರಸ್ಟ್ ಬಂಟ್ಸ್‌ಹಾಸ್ಟೆಲ್ ಇವರು ಡಾ.ಡಿ.ಕೆ.ಚೌಟ ದತ್ತಿ ನಿಧಿಯಿಂದ ನೀಡುವ ಯಕ್ಷಗಾನ ಪ್ರಶಸ್ತಿಗೆ 2014-15ನೇ ಸಾಲಿನಲ್ಲಿ ತೆಂಕು ತಿಟ್ಟು ಯಕ್ಷಗಾನದ ಹಿರಿಯ ವೇಷಧಾರಿ ಸಂಪಾಜೆ ಶೀನಪ್ಪ ರೈ ಆಯ್ಕೆಯಾಗಿದ್ದಾರೆ.
 ಆಗಸ್ಟ್‌ನಲ್ಲಿ ಎರಡನೇ ವಾರದಲ್ಲಿ ಮಂಗಳೂರಿನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ರು. 15 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.  ಸುಳ್ಯದ ಸಂಪಾಜೆ ಕೀಲಾರ್ ಮದೇಪಾಲು ಎಂಬಲ್ಲಿ 1943ರಲ್ಲಿ ಜನಿಸಿದ ಶೀನಪ್ಪ ರೈ, ಕಲಿತದ್ದು ನಾಲ್ಕನೇ ತರಗತಿ. ತಂದೆ ರಾಮಣ್ಣ ರೈಯಿಂದ ಅರ್ಥಗಾರಿಕೆ, ಕುಂಬಳೆ ಕಣ್ಣನ್‌ರಿಂದ ಕುಣಿತ, ಮಾಸ್ತರ್ ಕೇಶವರಿಂದ ಭರತನಾಟ್ಯ ಹಾಗೂ ಬಣ್ಣದ ಕುಟ್ಯಪ್ಪರಿಂದ ಬಣ್ಣಗಾರಿಕೆ ಅಭ್ಯಸಿಸಿದರು. ತನ್ನ 13ನೇ ವಯಸ್ಸಿನಲ್ಲಿ ಇರಾ ಕುಂಡಾವು ಮೇಳದಲ್ಲಿ ಯಕ್ಷಗಾನ ಪ್ರವೇಶಿಸಿದರು. ಬಳಿಕ ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಕಟೀಲು, ಎಡನೀರು, ಹೊಸನಗರ ಮೇಳಗಳಲ್ಲಿ ಒಟ್ಟು 58 ವರ್ಷ ತಿರುಗಾಟ ಮಾಡಿದ್ದಾರೆ. ಕಟೀಲು ಮೇಳದಲ್ಲಿ 33 ವರ್ಷ ತಿರುಗಾಟ ನಡೆಸಿ ಕಳೆದ 8 ವರ್ಷದಿಂದ ಹೊಸನಗರ ಮೇಳದ ಕಲಾವಿದರಾಗಿದ್ದಾರೆ.
 ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಳ್ಳಿ ಕಿಶನ್ ಹೆಗ್ಡೆ ಹಾಗೂ ಮಾಜಿ ಸದಸ್ಯ, ಪ್ರಾಧ್ಯಾಪಕ ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆ ಸಮಿತಿ ಇವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.