ವಿಶ್ವ ಆರೋಗ್ಯ ಸಮ್ಮೇಳನಕ್ಕೆ ಡಾ. ಅನ್ನಪೂರ್ಣ ಆಚಾರ್ಯ
ಮಣಿಪಾಲ: ಜೂ. 22ರಿಂದ 24ರವರೆಗೆ ಸಿಂಗಾಪುರದಲ್ಲಿ ನಡೆಯುವ ವಿಶ್ವ ಆರೋಗ್ಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಣಿಪಾಲ ಕೆ.ಎಂ.ಸಿ.ಯ ಯೋಗ ವಿಭಾಗದ ವ್ಯೆದ್ಯೆ ಡಾ. ಅನ್ನಪೂರ್ಣ ಆಚಾರ್ಯ 'ಮಧುಮೇಹವನ್ನು ತಡೆಗಟ್ಟುವಲ್ಲಿ ಯೋಗ ಚಿಕತ್ಸೆಯ ಪರಿಣಾಮಗಳು' ಎಂಬ ಸಂಶೋಧನಾ ಪ್ರಬಂಧ ಮಂಡಿಸಲು ಆಹ್ವಾನಿತರಾಗಿದ್ದಾರೆ. ಇವರು ಸೂರ್ಯ ನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನದ ನಿರಂತರ ಅಭ್ಯಾಸದಿಂದ ಮಧುಮೇಹ ರೋಗಿಗಳಲ್ಲಿ ಉಂಟಾಗುವ ಶಾರೀರಿಕ ಮತ್ತು ಮಾನಸಿಕ ಪರಿಣಾಮಗಳನ್ನು ಪ್ರಾತ್ಯಕ್ಷಿತೆ ಸಹಿತವಾಗಿ ಸಮ್ಮೇಳನದಲ್ಲಿ ವಿವರಿಸಲಿದ್ದಾರೆ. ಇವರು ಉಡುಪಿಯ ಡಾ.ಎ.ವಿ. ಬಾಳಿಗ ಆಸ್ವತ್ರೆಯ ಪ್ರೊಫೆಸರ್ ಡಾ.ಲತಾ ಕೆ.ಎಸ್. ಹಾಗೂ ಕೆಎಂಸಿ ಯೋಗ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಜೋಯಿಸ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದಾರೆ.
ತೇಜಗೆ ಪ್ರಜ್ಞಾ ಸಾಧಕ ಪ್ರಶಸ್ತಿ
ಉಪ್ಪಿನಂಗಡಿ: ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ ಸುಳ್ಯ ಇವರು ನಡೆಸಿದ ಸದಾ ಸಿದ್ಧರಾಗಿರೋಣ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇಜ ಎಸ್.ಎಸ್ ಇವರು ಏಳನೇ ತರಗತಿಯ ತಾಲೂಕು ಮಟ್ಟದ ಪ್ರಜ್ಞಾ ತಾಲೂಕು ಸಾಧಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಇಂದ್ರಪ್ರಸ್ಥ ಶಾಲೆಯ ವಿದ್ಯಾರ್ಥಿಯಾಗಿದ್ದು ಡಾ. ಶೈಲೇಂದ್ರ ಎಸ್. ಮತ್ತು ಡಾ.ಶಶಿಕಲಾ ದಂಪತಿ ಪುತ್ರ.
ಅರ್ಜಿ ಆಹ್ವಾನ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟವನ್ನು ತಡೆಗಟ್ಟಲು ದಾಳಿ ಕಾರ್ಯ ನಿರ್ವಹಿಸಲು ಕಾರ್ಮಿಕ ಇಲಾಖೆಯಿಂದ ನೋಂದಣಿಗೊಂಡ ಖಾಸಗಿ ಏಜನ್ಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಒಂದು ವರ್ಷ ಅವಧಿಗೆ ದಿನಗೂಲಿ ಆಧಾರದಲ್ಲಿ ಕೂಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಅರ್ಹ ಏಜನ್ಸಿಗಳು ದರಪಟ್ಟಿಯನ್ನು ಕಾರ್ಮಿಕ ಇಲಾಖೆಯ ನೋಂದಣಿ ದೃಢೀಕೃತ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಜೂ. 25 ಕೊನೆ ದಿನ. ಹೆಚ್ಚಿನ ಮಾಹಿತಿಗೆ ಕೊಂಚಾಡಿ ಉಪ ಆಯುಕ್ತರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಅರ್ಧ ಮುಚ್ಚಿದ ಕೊಳವೆ ಬಾವಿ
ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯಿತಿನ ಕರಂಬಾರು ಗ್ರಾಮದ ಕಾಜಿಮುಗೇರು ದೇವಸ್ಥಾನದ ತಿರುವಿನ ಬಳಿ ಅರ್ಧ ಮುಚ್ಚಿದ ಕೊಳವೆ ಬಾವಿಯೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಿಂದ ಕರಂಬಾರು ಗ್ರಾಮದ ದರ್ಬೆಪಲ್ಕೆ ಪರ್ಲಂಡ ಕಾಲೋನಿಯ ಜನರಿಗೆ ಕುಡಿಯುವ ನೀರಿಗಾಗಿ ಈ ಕೊಳವೆ ಬಾವಿಯನ್ನು ತೆರೆಯಲಾಗಿದೆ. ಈ ಬೋರ್ವೆಲ್ ಜೇಡಿ ಮಣ್ಣಿನಿಂದ ಕೂಡಿರುವುದರಿಂದ, 150 ಅಡಿ ಆಳ ತೆಗೆದು ಅರ್ಧಕ್ಕೆ ಬಿಟ್ಟಿರುತ್ತಾರೆ. ಗುಂಡಿಯು ಮಳೆ ನೀರಿನಿಂದ ಒಂದುವರೆ ಅಡಿಯಿಂದ 2 ಅಡಿ ಅಗಲವಾಗಿದೆ. ಈ ಗುಂಡಿಯನ್ನು ಮುಚ್ಚುವ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಾರ್ಗದಲ್ಲಿ ನೂರಾರು ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಿದ್ದು, ಅಪಾಯ ಖಂಡಿತಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

