ಸರ್ಕಾರಿ ಶಾಲೆಗಳಿಗೆ ದೃಶ್ಯ ಶ್ರವ್ಯ ಕೊಠಡಿ: ಸರ್ಕಾರದ ಜತೆ ಚರ್ಚೆ-ಯು.ಟಿ.ಖಾದರ್
ಮಂಗಳೂರು: ಆಡಿಯೋ ವಿಶುವಲ್ ಮೀಡಿಯಾ ರೂಮ್ನ್ನು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಲ್ಲೂ ತೆರೆಯಬೇಕು. ಈ ಹೊಸ ಸಾಧ್ಯತೆ ಬಗ್ಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಜತೆ ಚರ್ಚಿಸುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಭಾನುವಾರ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190 ಆಶ್ರಯದಲ್ಲಿ ಮಣ್ಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರು. 6 ಲಕ್ಷ ವೆಚ್ಚದಲ್ಲಿ ಅಳವಡಿಸಿದ ಆಡಿಯೋ ವಿಶುವಲ್ ಮೀಡಿಯಾ ರೂಮ್ ಉದ್ಘಾಟಿಸಿ ಮಾತನಾಡಿದರು.
ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಇಲ್ಲಿ ಇದನ್ನು ಅಳವಡಿಸಲಾಗಿದೆ. ಇದು ಆಂಗ್ಲ ಮಾಧ್ಯಮ ಶಾಲೆಗೆ ಮಾತ್ರ ಸೀಮಿತವಾಗಬಾರದು. ಗ್ರಾಮಾಂತರ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೂ ಇದನ್ನು ವಿಸ್ತರಿಸಬೇಕು. ಇದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಪಡೆಯಲು ಸಾಧ್ಯ ಎಂದರು.
ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಸಂಸ್ಥೆ ಅಧ್ಯಕ್ಷ ನೀಲ್ ರೋಡ್ರಿಗಸ್, ಉಪಾಧ್ಯಕ್ಷ ಸುನೀಲ್ ತಾಳಿತ್ತಾಯ ವೇದಿಕೆಯಲ್ಲಿದ್ದರು.
ಏನಿದು ಆಡಿಯೋ ವಿಶುವಲ್ ರೂಮ್?: ಹವಾನಿಯಂತ್ರಿತ ಕೊಠಡಿಯಲ್ಲಿ ಆಡಿಯೋ ವಿಶುವಲ್ ಮೀಡಿಯಾ ರೂಮ್ ಇದೆ. ಪ್ರಾಜೆಕ್ಟರ್, ಸ್ಕ್ರೀನ್, ಕಂಪ್ಯೂಟರ್, ಕಾರ್ಡ್ಲೆಸ್ ಮೈಕ್ರೋಫೋನ್ ಅಳವಡಿಸಲಾಗಿದೆ. ಆನಿಮೇಟೆಡ್ ವೀಡಿಯೋ, ನ್ಯಾಷನಲ್ ಜಯಾಗ್ರಫಿ, ನಾಸಾ ಚಿತ್ರಗಳು, ಪರಿಸರ, ವಿಜ್ಞಾನ, ಗಣಿತ ಬೋಧನೆಗೆ ಅವಕಾಶ. ಅಲ್ಲದೆ ಇಂಗ್ಲಿಷ್ ಕಲಿಕೆ ವ್ಯವಸ್ಥೆಯೂ ಇದೆ. ಮುಖ್ಯವಾಗಿ ವಿಶ್ವದ ಆಗುಹೋಗುಗಳನ್ನು ಸುಲಭದಲ್ಲಿ ತಿಳಿದುಕೊಳ್ಳಲು ಸಾಧ್ಯವಿದೆ. ಈ ವ್ಯವಸ್ಥೆಯಿಂದ ಶಿಕ್ಷಕರ ಕೊರತೆ ನೀಗಿಸಬಹುದು. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇತರರಿಗೂ ತರಬೇತಿ ಮತ್ತಿತರ ಕಾರ್ಯಕ್ಕೆ ಇದನ್ನು ಬಳಸಬಹುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

